ಉತ್ತರಪ್ರದೇಶದ ಆಲಿಘರ್ ನಲ್ಲಿ ಕೊರೋನಾ ಸೋಂಕಿತ ಮೇಲೆ ವೈದ್ಯ ಎರಡು ಸಲ ಅತ್ಯಾಚಾರಕ್ಕೆ ಯತ್ನಿಸಿದ ಆರೋಪ ಕೇಳಿಬಂದಿದೆ.
28 ವರ್ಷದ ಸೋಂಕಿತೆ ಮೇಲೆ ರಾತ್ರಿ ಕರ್ತವ್ಯನಿರತ ವೈದ್ಯ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆಲಿಘರ್ ದೀನದಯಾಳ್ ಆಸ್ಪತ್ರೆಯಲ್ಲಿ ಸೋಂಕಿತೆ ಚಿಕಿತ್ಸೆ ಪಡೆಯುತ್ತಿದ್ದು ರಾತ್ರಿ ವೇಳೆಯಲ್ಲಿ ವಾರ್ಡ್ ಗೆ ಬಂದಿದ್ದ ವೈದ್ಯ ಎರಡು ಬಾರಿ ಅತ್ಯಾಚಾರಕ್ಕೆ ಯತ್ನಿಸಿರುವುದಾಗಿ ಆರೋಪಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.