ಕೇಂದ್ರ ಸರ್ಕಾರ ಹಿಂದಿಯೇತರ ರಾಜ್ಯಗಳ ಮೇಲೆ ಬಲವಂತವಾಗಿ ಹಿಂದಿ ಹೇರಿಕೆ ಮಾಡುತ್ತಿದೆ ಎಂಬ ಆರೋಪವನ್ನು ತಮಿಳುನಾಡಿನ ಡಿಎಂಕೆ ಪಕ್ಷ ಹಲವು ದಿನಗಳಿಂದಲೂ ಮಾಡಿಕೊಂಡು ಬರುತ್ತಿದೆ. ಇದಕ್ಕೆ ಪೂರಕವಾಗಿ ಸಂಸದೆ ಕನಿಮೋಳಿ ಟ್ವೀಟ್ ಮಾಡಿದ್ದರು.
ಇದೀಗ ರೈಲು ಪ್ರಯಾಣಿಕರಿಗೆ ಟಿಕೆಟ್ ಕಾಯ್ದಿರಿಸಿದ ವೇಳೆ ಖಾತರಿ ಸಂದೇಶ ಹಿಂದಿ ಭಾಷೆಯಲ್ಲಿ ಬರುತ್ತಿದೆ ಎಂಬ ವಿಚಾರಕ್ಕೆ ಡಿಎಂಕೆ ನಾಯಕರು ಮತ್ತು ಗರಂ ಆಗಿದ್ದಾರೆ. ಹಿಂದಿ ಹೇರಿಕೆ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದ ನಂತರವೂ ಪದೇ ಪದೇ ಇಂತಹ ಪ್ರಕರಣಗಳು ಮರುಕಳಿಸುತ್ತಿದೆ ಎಂದು ಡಿಎಂಕೆ ಆರೋಪಿಸಿದೆ.
ಆದರೆ ಈ ಕುರಿತು ದಕ್ಷಿಣ ರೈಲ್ವೆಯ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ಇದು ತಮ್ಮ ವ್ಯಾಪ್ತಿಗೆ ಬರುವುದಿಲ್ಲ. ಟಿಕೆಟ್ ನೀಡುವ ಅಧಿಕೃತ ಸಂಸ್ಥೆಯಾದ ಐ.ಆರ್.ಸಿ.ಟಿ.ಸಿ. ವ್ಯಾಪ್ತಿಗೆ ಬರಲಿದ್ದು, ಅವರೇ ಇದಕ್ಕೆ ಪ್ರತಿಕ್ರಿಯೆ ನೀಡಬೇಕು ಎಂದು ತಿಳಿಸಿದೆ.