ನಿರ್ಗತಿಕ ವಯಸ್ಕರೆಂಬ ಕರುಣೆಯ ಲವಲೇಶವೂ ಇಲ್ಲದೇ ನಗರದ ಹೊರವಲಯಕ್ಕೆ ಅಟ್ಟುತ್ತಿರುವ ಇಂದೋರ್ ನಗರಪಾಲಿಕೆ ಕಾರ್ಯಕರ್ತರ ವಿಡಿಯೋವೊಂದು ವೈರಲ್ ಆಗಿದೆ.
ಕೇಂದ್ರ ಗೃಹ ಹಾಗೂ ನಗರಾಭಿವೃದ್ಧಿ ವ್ಯವಹಾರಗಳ ಸಚಿವಾಲಯದ ವರದಿಗಳ ಪ್ರಕಾರ ಇಂದೋರ್ ಸತತ ನಾಲ್ಕು ವರ್ಷಗಳಿಂದ ದೇಶದ ಅತ್ಯಂತ ಸ್ವಚ್ಛ ನಗರವೆಂಬ ಖ್ಯಾತಿಗೆ ಪಾತ್ರವಾಗಿದೆ.
ಸ್ಫೋಟದ ಹೊಣೆಹೊತ್ತ ಜೈಷ್-ಉಲ್-ಹಿಂದ್ ಉಗ್ರ ಸಂಘಟನೆ
ವಾಸಿಸಲು ಸೂರಿಲ್ಲದ ನಿರ್ಗತಿಕ ಜನರನ್ನು ಲಾರಿಗಳಿಗೆ ತುಂಬಿಕೊಂಡು ಬಂದು ನಗರದ ಹೊರವಲಯದಲ್ಲಿ ಬಿಡುತ್ತಿರುವ ವಿಡಿಯೋಗಳನ್ನು ಸ್ಥಳೀಯರೊಬ್ಬರು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಗ್ರಾಮಸ್ಥರ ತೀವ್ರ ವಿರೋಧದ ಕಾರಣದಿಂದ ಈ ಹಿರಿಯ ಜೀವಗಳನ್ನು ಮತ್ತೆ ಟ್ರಕ್ ಒಳಗೆ ತುಂಬಿಸಿಕೊಳ್ಳಲಾಗಿದೆ. ಈ ಸಂಬಂಧ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿ, ಒಬ್ಬರನ್ನು ವರ್ಗಾಯಿಸಲಾಗಿದೆ.