ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕಿ ಬಾತ್’ ಆಗಸ್ಟ್ 30 ರ ಭಾನುವಾರ ಆವೃತ್ತಿಗೆ ಸಾಮಾಜಿಕ ಜಾಲತಾಣಗಳಲ್ಲಿ 10 ಲಕ್ಷಕ್ಕೂ ಅಧಿಕ ಡಿಸ್ ಲೈಕ್ ಬಂದಿದೆ.
ಬಿಜೆಪಿಯ ಅಧಿಕೃತ ಯುಟ್ಯೂಬ್ ಚಾನೆಲ್ ನಲ್ಲಿ ‘ಮನ್ ಕಿ ಬಾತ್’ ವಿಡಿಯೋ ಪೋಸ್ಟ್ ಮಾಡಲಾಗಿದ್ದು, 10 ಲಕ್ಷಕ್ಕೂ ಅಧಿಕ ಜನರು ಡಿಸ್ ಲೈಕ್ ಮಾಡಿದ್ದಾರೆ. ಆದರೆ ಈ ಡಿಸ್ ಲೈಕ್ ಗಳನ್ನು ಡಿಲೀಟ್ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.
9.92 ಲಕ್ಷದಷ್ಟು ಇದ್ದ ಡಿಸ್ ಲೈಕ್ ಗಳಲ್ಲಿ ಲಕ್ಷಾಂತರ ಡಿಸ್ ಲೈಕ್ ಡಿಲೀಟ್ ಮಾಡಲಾಗಿದೆ. ಈ ಮೂಲಕ ಪ್ರಧಾನಿ ಮೋದಿಯವರು ಜನರ ಪ್ರತಿಕ್ರಿಯೆ ಎದುರಿಸಲು ಭಯಪಡುತ್ತಿದ್ದಾರೆ ಎಂದು ಹೇಳಲಾಗಿದೆ. ಡಿಸ್ ಲೈಕ್ ಬಗ್ಗೆ ಸ್ಕ್ರೀನ್ ಶಾಟ್ ಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದ್ದು, ವೈರಲ್ ಆಗಿದೆ ಎನ್ನಲಾಗಿದೆ.