ಅಹಮದಾಬಾದ್: ಗುಜರಾತ್ ರಾಜಧಾನಿ ಗಾಂಧಿನಗರದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಮಹಿಳೆಯೊಬ್ಬಳು ಗಂಡನಿಗೆ ವಿಷವುಣಿಸಿದ್ದು ಅದರಿಂದ ಸಾಯದಿದ್ದಾಗ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾಳೆ.
23 ವರ್ಷದ ವಾಕ್ಜಿ ಪಟೇಲ್ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಗಾಂಧಿನಗರ ಸೆಕ್ಟರ್ 6ರಲ್ಲಿ ಘಟನೆ ನಡೆದಿದೆ ಉಮಿಯಾ ಪಟೇಲ್ ಎನ್ನುವ ಮಹಿಳೆ ಇಂತಹ ಕೃತ್ಯವೆಸಗಿದ್ದು ವಿಚಾರಣೆ ಸಂದರ್ಭದಲ್ಲಿ ವಿಷ ಪರಿಣಾಮ ಬೀರದ ಕಾರಣ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎನ್ನುವುದು ಗೊತ್ತಾಗಿದೆ ಎಂದು ಗಾಂಧಿನಗರ ಪೊಲೀಸ್ ಅಧೀಕ್ಷಕ ಮಯೂರ್ ಚಾವ್ಲಾ ಹೇಳಿದ್ದಾರೆ.