ಚಲಿಸುವ ರೈಲನ್ನು ಹತ್ತಲು ಹೋದ ವಿಕಲಚೇತನನೊಬ್ಬ ಇನ್ನೇನು ರೈಲಿನಡಿ ಸಿಲುಕಬೇಕು ಎನ್ನುವಷ್ಟರಲ್ಲಿ ಅಪಾಯದಿಂದ ಪಾರಾಗಿದ್ದಾನೆ.
ಮಹಾರಾಷ್ಟ್ರದ ಪನ್ವೇಲ್ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಆ ವ್ಯಕ್ತಿ ಅಲ್ಲಿಗೆ ಬಾರದೇ ಇದ್ದಿದ್ದರೆ ವಿಕಲಚೇತನ ಬದುಕುತ್ತಲೇ ಇರಲಿಲ್ಲ.
ಹೌದು, ಚಲಿಸುವ ರೈಲಿನ ಬಾಗಿಲು ಹಿಡಿದು ಕುಂಟುತ್ತಾ ಓಡಿದ ವ್ಯಕ್ತಿಯೊಬ್ಬನನ್ನು ಗಮನಿಸಿದ ರೈಲ್ವೆ ಭದ್ರತಾ ಪಡೆಯ ಸಿಬ್ಬಂದಿ(ಆರ್ ಪಿ ಎಫ್), ಆತನನ್ನು ಹಿಡಿಯಲು ಅಷ್ಟೇ ವೇಗವಾಗಿ ಓಡಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಹಿಮಪಾತಕ್ಕೆ ಸಿಲುಕಿ ವೃದ್ಧ ಸಾವು
ರೈಲಿನ ವೇಗ ಹೆಚ್ಚುತ್ತಿದ್ದಂತೆಯೇ ವಿಕಲಚೇತನ ಹಿಡಿದಿದ್ದ ರೈಲಿನ ಬಾಗಿಲ ಕಂಬಿ ಕೈಬಿಟ್ಟಿದ್ದು ಪ್ಲಾಟ್ ಫಾರಂ ನಲ್ಲಿ ಉರುಳಿ ಬಿದ್ದ. ಅದೇ ಸಮಯಕ್ಕೆ ಆರ್ ಪಿ ಎಫ್ ಸಿಬ್ಬಂದಿ ಆತನನ್ನು ಪಕ್ಕಕ್ಕೆ ಎಳೆದುಕೊಂಡಿದ್ದರಿಂದ ಪ್ರಾಣಾಪಾಯ ತಪ್ಪಿತು.
ರೈಲ್ವೆ ನಿಲ್ದಾಣದ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾದ ಈ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ರೈಲ್ವೆ ಸಚಿವ ಪೀಯೂಷ್ ಗೋಯಲ್, ವಿಕಲಚೇತನನ ಜೀವ ಉಳಿಸಿದ ಆರ್ ಪಿ ಎಫ್ ಸಿಬ್ಬಂದಿಯ ಕರ್ತವ್ಯ ಹಾಗೂ ಸಮಯಪ್ರಜ್ಞೆಯನ್ನು ಶ್ಲಾಘಿಸಿದ್ದಾರೆ.