ಹೊಂಡ – ಗುಂಡಿಯಿಂದ ತುಂಬಿದ ರಸ್ತೆಗಳು ಸಾಮಾನ್ಯವಾಗಿ ದೇಶಾದ್ಯಂತ ಕಂಡು ಬರುತ್ತೆ. ಅನೇಕರು ಮನಸ್ಸಲ್ಲೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನ ಬೈದುಕೊಂಡರೆ ಕೆಲವೇ ಕೆಲವರು ಮಾತ್ರ ರಸ್ತೆ ಸುಧಾರಣೆ ಮಾಡಿ ಅಂತಾ ಧ್ವನಿ ಎತ್ತುತ್ತಾರೆ.
ಉತ್ತರಾಖಂಡದ ಚಮೋಲಿ ಜಿಲ್ಲೆಯ ದೇವರ್ಖಡೋರಾ ಗ್ರಾಮದಲ್ಲಿ ಹಾಳಾದ ರಸ್ತೆಯ ಬಗ್ಗೆ ಬಾಲಕಿಯೊಬ್ಬಳು ವರದಿ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾಳೆ.
ಉತ್ತರಾಖಂಡ್ ರಾಜ್ಯದ ಚಮೋಲಿ ಜಿಲ್ಲೆಯ ಗ್ರಾಮವೊಂದಕ್ಕೆ ಸೇರಿದ ರಸ್ತೆ ಸಂಪೂರ್ಣ ಹಾಳಾಗಿ ಹೋಗಿತ್ತು. ಈ ಬಗ್ಗೆ ಸ್ಥಳೀಯರು ಅಧಿಕಾರಿಗಳಿಗೆ ದೂರು ನೀಡಿ ಪ್ರತಿಭಟನೆ ನಡೆಸಿದ್ರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಸಂದರ್ಭದಲ್ಲಿ ಸುಹಾನಿ ಬಿಶ್ತ್ ಎಂಬ 11ನೇ ತರಗತಿ ವಿದ್ಯಾರ್ಥಿನಿ ರಸ್ತೆಯ ಗ್ರೌಂಡ್ ರಿಪೋರ್ಟ್ನ್ನ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾಳೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಕೇವಲ 12 ಗಂಟೆಯೊಳಗಾಗಿ ಅಲರ್ಟ್ ಆದ ಆಧಿಕಾರಿಗಳು ರಸ್ತೆ ಪುನರ್ನಿರ್ಮಾಣ ಮಾಡಿದ್ದಾರೆ .