
ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಟೋಪಿ ಧರಿಸಿ ನಮಜ್ ಮಾಡುತ್ತಿರುವ ಫೋಟೋವೊಂದು ವೈರಲ್ ಆಗಿದೆ.
ಅದರಲ್ಲೂ ಅದು ವರ್ಷದ ಮೊದಲ ದಿನವಾದ ಜನವರಿ 1 ರಂದು ದಿಲ್ಲಿಯ ಜಾಮಿಯ ಮಸೀದಿಗೆ ತೆರಳಿ ನಮಾಜ್ ಸಲ್ಲಿಸಿದ್ದಾರೆಂಬ ಅಡಿ ಟಿಪ್ಪಣಿ ಸಹ ಅದರೊಟ್ಟಿಗೆ ಇದೆ. ಸಾಕಷ್ಟು ಕಮೆಂಟ್ ಗಳೂ ಹರಿದಾಡಿದ್ದವು.
ಇಂಡಿಯಾ ಟುಡೇ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ ಮೂಲಕ ಫ್ಯಾಕ್ಟ್ ಚೆಕ್ ಮಾಡಿದ್ದು, ಅದು 2016 ರಂದು ರಂಜಾನ್ ಸಂದರ್ಭದಲ್ಲಿ ಪಂಜಾಬ್ ನಲ್ಲಿ ಸೆರೆ ಹಿಡಿದ ಚಿತ್ರ ಎಂಬುದನ್ನು ಖಚಿತಪಡಿಸಿದೆ.