ನಾಗಾಲ್ಯಾಂಡ್ನ ರೈತನೊಬ್ಬನಿಗೆ ವಜ್ರದ ರೀತಿಯ ಕಲ್ಲು ಕಂಡುಬಂದ ಹಿನ್ನೆಲೆ ರಾಜ್ಯ ಸರ್ಕಾರ ಭೂ ವಿಜ್ಞಾನಿಗಳಿಗೆ ಈ ಬಗ್ಗೆ ತನಿಖೆ ನಡೆಸುವಂತೆ ಸೂಚನೆ ನೀಡಿದೆ.
ನಾಗಾಲ್ಯಾಂಡ್ನ ಸೋಮ ಜಿಲ್ಲೆಯಲ್ಲಿ ವಜ್ರದ ರೀತಿಯ ಕಲ್ಲುಗಳು ದೊರೆತಿದ್ದು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗಿದ್ದವು.
ಹೀಗಾಗಿ ರಾಜ್ಯ ಸರ್ಕಾರ ಈ ಬಗ್ಗೆ ತನಿಖೆ ನಡೆಸಲು ಆಸಕ್ತಿ ತೋರಿಸಿದೆ. ನಾಗಾಲ್ಯಾಂಡ್ನ ಭೂ ವಿಜ್ಞಾನ ಹಾಗೂ ಗಣಿಗಾರಿಕಾ ನಿರ್ದೇಶಕ ಎಸ್ ಮಾನೇನ್ ಹೊರಡಿಸಿದ ಆದೇಶದಲ್ಲಿ ಅಬೆಂಟುಂಗ್ ಲೋಥಾ, ಲಾಂಗ್ರಿಕಾಬಾ, ಕೆನ್ಯೆಲೊ ರೆಂಗ್ಮಾ ಹಾಗೂ ಡೇವಿಡ್ ಲುಪೆನಿ ಎಂದ ನಾಲ್ಕು ಭೂ ವಿಜ್ಞಾನಿಗಳ ಹೆಸರನ್ನ ನಮೂದಿಸಲಾಗಿದೆ.
ಈ ತಂಡವು ನವೆಂಬರ್ 30 ಅಥವಾ ಡಿಸೆಂಬರ್ 1ರಂದು ಗ್ರಾಮವನ್ನ ತಲುಪುವ ಸಾಧ್ಯತೆ ಇದೆ.