ಢಾಕಾದಲ್ಲಿ ಮೋಟಾರು ಚಾಲಿತ ರಿಕ್ಷಾಗಳನ್ನು ನಿಷೇಧಿಸಿದ್ದು, ಅಂತಹ ರಿಕ್ಷಾಗಳನ್ನು ಜಪ್ತಿ ಮಾಡುತ್ತಿರುವುದರಿಂದ ಇದನ್ನೇ ಉದ್ಯೋಗ ಮಾಡಿಕೊಂಡಿದ್ದ ಅನೇಕರು ಬೀದಿಗೆ ಬೀಳುವಂತಾಗಿದೆ.
ಇತ್ತೀಚೆಗೆ ಮೂರು ಚಕ್ರದ ಈ ರಿಕ್ಷಾಗಳೆಲ್ಲವೂ ಮೋಟಾರು ಚಾಲಿತವಾಗಿದ್ದು, ಬಹುತೇಕರ ಬಳಿ ಸಾಂಪ್ರದಾಯಿಕವಾಗಿ ಕಾಲಿನಿಂದ ತುಳಿದು ಚಲಾಯಿಸುವ ರಿಕ್ಷಾಗಳಿಲ್ಲ.
ಕೊರೋನಾ ಲಾಕ್ ಡೌನ್ ನಿಂದ ಕೆಲಸ ಕಳೆದುಕೊಂಡಿದ್ದ ಫಜ್ಲೂರ್ ರೆಹಮಾನ್ ಎಂಬಾತ ಜೀವನ ನಡೆಸುವುದಕ್ಕಾಗಿ 80 ಸಾವಿರ ರೂ. ಸಾಲ ಪಡೆದು ಇತ್ತೀಚೆಗಷ್ಟೆ ಬ್ಯಾಟರಿ ಚಾಲಿತ ರಿಕ್ಷಾ ಖರೀದಿಸಿ, ಓಡಿಸಲು ಶುರು ಮಾಡಿದ್ದ.
ಆದರೆ, ಢಾಕಾ ನಗರಾಡಳಿತವು ಇವುಗಳನ್ನು ನಿಷೇಧಿಸಿರುವುದರಿಂದ ರೆಹಮಾನ್ ರಿಕ್ಷಾವೂ ಜಪ್ತಿಯಾಯಿತು. ಆತ ಕಣ್ಣೀರಿಟ್ಟು, ಅಧಿಕಾರಿಗಳನ್ನು ಬೇಡಿಕೊಳ್ಳುತ್ತಿದ್ದ ಕರುಣಾಜನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿ ಕೆಲವರು ಈತನ ನೆರವಿಗೆ ಬಂದಿದ್ದು, ಈ ಪೈಕಿ ಅಹ್ಸಾನ್ ಭುಯಾನ್ ಎಂಬಾತ ಹೊಸ ರಿಕ್ಷಾ ಕೊಡಿಸಲು ಮುಂದಾಗಿದ್ದಾರೆ.
https://www.facebook.com/thisissakirahman/videos/660661341529627/?t=24