alex Certify ಕತ್ತರಿ ಬಳಸದೆ ಕಟಿಂಗ್‌ ಮಾಡಿಕೊಂಡ ವ್ಯಕ್ತಿ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕತ್ತರಿ ಬಳಸದೆ ಕಟಿಂಗ್‌ ಮಾಡಿಕೊಂಡ ವ್ಯಕ್ತಿ ವಿಡಿಯೋ ವೈರಲ್

WATCH: Desi Uncle's 'Jugaad' Technique of Shaving without Razor Will Leave You in Splits

ದಿನನಿತ್ಯದ ಯಾವುದೇ ಜಟಿಲ ಸಮಸ್ಯೆಗೂ ತ್ವರಿತ ಪರಿಹಾರ ಕಂಡುಕೊಳ್ಳುವ ’ಜುಗಾಡ್’ ಕಲೆಯಲ್ಲಿ ಭಾರತೀಯರು ಸಿದ್ಧಹಸ್ತರು. ಪ್ರತಿನಿತ್ಯದ ಹವ್ಯಾಸಗಳಿಂದ ಹಿಡಿದು ಮನೆಗೆಲಸದವರೆಗೂ ಈ ಜುಗಾಡ್‌ಗಳು ಕೆಲಸ ಮಾಡುತ್ತವೆ.

ಹಿರಿಯ ವ್ಯಕ್ತಿಯೊಬ್ಬರು ತಮ್ಮ ಗಡ್ಡವನ್ನು ಡಿಐವೈ ರೇಜರ್‌ ಮೂಲಕ ಶೇವ್‌ ಮಾಡುತ್ತಿರುವ ವಿಡಿಯೋವೊಂದು ಸದ್ದು ಮಾಡುತ್ತಿದೆ. ಕಡ್ಡಿಗಳು ಹಾಗೂ ದಾರ ಬಳಸಿಕೊಂಡು ಈ ವ್ಯಕ್ತಿ ತಮ್ಮದೇ ಉಪಕರಣವನ್ನು ಮಾಡಿಕೊಂಡಿದ್ದು, ಅದಕ್ಕೆ ಈ ರೇಜರ್‌ ಅಂಟಿಸಿದ್ದಾರೆ. ’ವಿ’ ಆಕೃತಿಯಲ್ಲಿ ಎರಡು ಕಡ್ಡಿಗಳನ್ನು ಅಂಟಿಸಿದ್ದು, ಬಳಕೆಗೆ ಅನುವು ಮಾಡಿಕೊಡಲಾಗಿದೆ.

ಮನೆಗೆ ಬೆಂಕಿಯಿಟ್ಟು 7 ಜನರನ್ನು ಹತ್ಯೆಗೈದ ವ್ಯಕ್ತಿ ಶವವಾಗಿ ಪತ್ತೆ

ಈ ಜುಗಾಡ್ ವ್ಯಕ್ತಿ ಯಾರೆಂದು ಇಲ್ಲಿಯವರೆಗೂ ತಿಳಿದುಬಂದಿಲ್ಲ. ವೈರಲ್ ಆಗಿರುವ ಈ ವಿಡಿಯೋವನ್ನು ಎಲ್ಲಿ ಶೂಟ್ ಮಾಡಲಾಗಿದೆ ಎಂಬುದೂ ತಿಳಿದು ಬಂದಿಲ್ಲ.

ತಮ್ಮ ಹೇರ್ ‌ಕಟಿಂಗ್ ‌ಅನ್ನು ಖುದ್ದು ತಾವೇ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರ ವಿಡಿಯೋವೊಂದು ಈ ಹಿಂದೆ ವೈರಲ್ ಆಗಿತ್ತು. ಇದರಲ್ಲಿ ಆಸಕ್ತಿಕರ ಪಾರ್ಟ್ ಎಂದರೆ ಆ ವ್ಯಕ್ತಿ ಯಾವುದೇ ಕತ್ತರಿ ಅಥವಾ ಟ್ರಿಮ್ಮರ್‌ ಬಳಸದೇ ಕಟ್ಟಿಂಗ್ ಮಾಡಿಕೊಳ್ಳುವುದು. ಬಾಚಣಿಗೆ, ಬ್ಲೇಡ್ ಹಾಗೂ ಪೇಪರ್‌ ಕ್ಲಿಪ್ ಬಳಸಿಕೊಂಡು ಈ ವ್ಯಕ್ತಿ ಹೇರ್‌ಕಟಿಂಗ್ ಉಪಕರಣ ತಯಾರಿಸಿದ್ದು, ತಲೆಬಾಚುವಂತೆ ಉಪಕರಣವನ್ನು ತೆಗೆದುಕೊಂಡು ಹೋದಂತೆ ಕೂದಲೆಲ್ಲಾ ಒಂದೇ ಅಳತೆಯಲ್ಲಿ ಕಟ್ ಆಗುವುದನ್ನು ನೋಡಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...