
ಇದೇ ರೀತಿಯ ಇನ್ನೊಂದು ಘಟನೆ ಇದೀಗ ನೊಯ್ಡಾದಿಂದ ವರದಿಯಾಗಿದೆ. ಹೂ ಕುಂಡಗಳನ್ನ ಮಾರಾಟ ಮಾಡುವ ಪ್ರೇಮ್ ಸಿಂಗ್ ಎಂಬ ಬೀದಿ ಬದಿಯ ವ್ಯಾಪಾರಿಗೆ ಸ್ಥಳೀಯರು ನೆರವಾಗಿದ್ದಾರೆ.
ಪ್ರೇಮ್ ಸಿಂಗ್ಗೆ ಸಹಾಯ ಮಾಡಬೇಕೆಂಬ ಉದ್ದೇಶ ಹೊತ್ತ ಪತ್ರಕರ್ತ ತವ್ಲೀನ್ ಸಿಂಗ್ ಅರೂರ್ ಎಂಬವರು ಪ್ರೇಮ್ ಸಿಂಗ್ರ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಸಹಾಯ ಮಾಡುವಂತೆ ಮನವಿ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲಗತಾಣದಲ್ಲಿ ವೈರಲ್ ಆಗಿದ್ದು, ಸ್ಥಳೀಯ ನಿವಾಸಿಗಳು ಬಡ ವ್ಯಾಪಾರಿಗೆ ಸಹಾಯ ಹಸ್ತ ಚಾಚಿದ್ದಾರೆ.
https://twitter.com/V_Abhyudaya/status/1346826207082385408