ದೀಪಾವಳಿ ಹತ್ತಿರವಾಗುತ್ತಿದ್ದಂತೆಯೇ ದೇಶದ ಉದ್ದಗಲಕ್ಕೂ ಹಬ್ಬದ ಆಚರಣೆಯ ಮೂಡ್ ನೆಲೆಸಿದೆ. ಕೋವಿಡ್-19 ಸಾಂಕ್ರಮಿಕದ ಹೊರತಾಗಿಯೂ, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಸಿಂಪಲ್ ಆಗಿಯಾದರೂ ಹಬ್ಬ ಮಾಡುವ ಮೂಡ್‌ನಲ್ಲಿದ್ದಾರೆ ದೇಶವಾಸಿಗಳು.
ಶಾಪಿಂಗ್ ಮಾಡುವ ಪ್ರದೇಶಗಳೆಲ್ಲಾ ಈಗ ಹಬ್ಬದ ಥೀಮ್‌ನಲ್ಲಿ ಸಿಂಗರಿಸಿಕೊಂಡು ನಳನಳಿಸುತ್ತಿವೆ. ಪಶ್ಚಿಮ ದೆಹಲಿಯ ಪೆಸಿಫಿಕ್ ಮಾಲ್‌ನಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮ ಮಂದಿರದ ಪ್ರತಿರೂಪವನ್ನು ಸ್ಥಾಪಿಸಲಾಗಿದೆ.
32 ಅಡಿ ಉದ್ದ ಹಾಗೂ 48 ಅಡಿ ಅಗಲವಿರುವ ಈ ಮಿನಿ ರಾಮ ಮಂದಿರ ನಿರ್ಮಾಣಕ್ಕೆ 80 ತಜ್ಞರು 40-45 ದಿನಗಳ ಕಾಲ ಶ್ರಮಿಸಿದ್ದಾರೆ. ಸಂಕಷ್ಟದ ಕಾಲದಲ್ಲಿ ಬಂದಿರುವ ಈ ಬಾರಿಯ ದೀಪಾವಳಿಯ ಸಂದರ್ಭದಲ್ಲಿ ಜನರಲ್ಲಿ ಪಾಸಿಟಿವ್ ಮೂಡ್ ತರಿಸುವ ಪ್ರಯತ್ನದಲ್ಲಿ ಈ ಮಂದಿರ ನಿರ್ಮಾಣ ಮಾಡಲಾಗಿದೆ ಎಂದು ಮಾಲ್‌ನ ಮ್ಯಾನೇಜರ್ ಲಲಿತ್ ರಾಥೋಡ್ ತಿಳಿಸಿದ್ದಾರೆ.
ಕಳೆದ ಆಗಸ್ಟ್‌ನಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗಿತ್ತು.