ಕಳೆದ ಶುಕ್ರವಾರ ದೆಹಲಿ ಪೊಲೀಸರು ಎರಡು ಪ್ರತಿಷ್ಟಿತ ರೆಸ್ಟೋರೆಂಟ್ ಗಳ ಮೇಲೆ ದಾಳಿ ನಡೆಸಿ 105 ಆಕ್ಸಿಜನ್ ಕಾನ್ಸನ್ಟ್ರೇಟರ್ಗಳನ್ನ ವಶಕ್ಕೆ ಪಡೆದಿದ್ದರು. ಇದರಲ್ಲಿ 96 ಆಕ್ಸಿಜನ್ ಸಿಲಿಂಡರ್ಗಳನ್ನ ಖಾನ್ ಚಾಚಾ ರೆಸ್ಟೋರೆಂಟ್ ನಿಂದ ವಶಕ್ಕೆ ಪಡೆಯಲಾಗಿದೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ನುಳಿದ 9 ಕಾನ್ಸನ್ಟ್ರೇಟರ್ಗಳು ಟೌನ್ ಹಾಲ್ ರೆಸ್ಟೋರೆಂಟ್ನಲ್ಲಿ ಲಭ್ಯವಾಗಿದೆ. ದೇಶದಲ್ಲಿ ವೈದ್ಯಕೀಯ ಸೌಲಭ್ಯಗಳ ಅಭಾವ ಉಂಟಾಗ್ತಿರೋ ಈ ಸಂದರ್ಭದಲ್ಲಿ ಪ್ರತಿಷ್ಟಿತ ರೆಸ್ಟೋರೆಂಟ್ ಗಳು ಕಾಳದಂಧೆಗೆ ಇಳಿದಿರೋದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಇನ್ನು ಈ ವಿಚಾರವಾಗಿ ಮಾತನಾಡಿರುವ ಉಪ ಕಮಿಷನರ್ ಅತುಲ್ ಕುಮಾರ್, ರೆಸ್ಟೋರೆಂಟ್ ಮಾಲೀಕ ನವನೀತ್ ಕಲ್ರಾ ತಲೆ ಮರೆಸಿಕೊಂಡಿದ್ದು ಆತನ ಫೋನ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ಹೇಳಿದ್ದಾರೆ. ಪ್ರಕರಣ ಸಂಬಂಧ ಗೌರವ್, ಸತೀಶ್ ಸೇಠಿ, ವಿಕ್ರಾಂತ್ ಹಾಗೂ ಹಿತೇಶ್ ಎಂಬವರನ್ನ ಬಂಧಿಸಲಾಗಿದೆ.
ಈ ಎರಡೂ ರೆಸ್ಟೋರೆಂಟ್ ಗಳು ದೆಹಲಿಯ ಪ್ರಖ್ಯಾತ ರೆಸ್ಟೋರೆಂಟ್ ಗಳ ಸಾಲಿಗೆ ಸೇರಿದ್ದು ಈ ಪ್ರಕರಣದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ನಕಾರಾತ್ಮಕ ಪ್ರತಿಕ್ರಿಯೆಯನ್ನ ಪಡೆಯುತ್ತಿದೆ. ರೆಸ್ಟೋರೆಂಟ್ ಅಮಾನವೀಯ ಕೃತ್ಯ ಎಸಗಿದೆ. ಇಂತಹ ಹೋಟೆಲ್ಗಳನ್ನ ಬಂದ್ ಮಾಡೋದೇ ಒಳ್ಳೆಯದು. ಇಂತಹ ರೆಸ್ಟೋರೆಂಟ್ ಗೆ ನಾವೆಂದಿಗೂ ಭೇಟಿ ನೀಡೋ ಮಾತೇ ಇಲ್ಲ. ಬಾಯ್ಕಾಟ್ ಖಾನ್ ಚಾಚಾ ಎಂದು ಸಾಕಷ್ಟು ಕಮೆಂಟ್ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ.
https://twitter.com/i/status/1390313260474273795