ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿಮೀರಿದ್ದು ಗಾಳಿಯ ಗುಣಮಟ್ಟ ತೀರಾ ಹದಗೆಟ್ಟಿದೆ.
ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಯ ಅಂಕಿ ಅಂಶಗಳ ಪ್ರಕಾರ ಗಾಳಿ ಗುಣಮಟ್ಟವು ಆನಂದ ವಿಹಾರದಲ್ಲಿ 401, ಅಲಿಪುರದಲ್ಲಿ 405 ಹಾಗೂ ವಾಜೀರ್ಪುರದಲ್ಲಿ 410 ಸೂಚ್ಯಂಕ ತಲುಪಿದೆ. ಗಾಳಿ ಗುಣಮಟ್ಟ 0-50 ಇದ್ರೆ ಅದನ್ನ ಉತ್ತಮ, 51-100 ಇದ್ದರೆ ತೃಪ್ತಿದಾಯಕ, 101-200 ಇದ್ದರೆ ಮಧ್ಯಮ , 201-300 ಇದ್ದರೆ ಕಳಪೆ, 301 -400 ತೀರಾ ಕಳಪೆ ಹಾಗೂ 401-500 ಇದ್ದರೆ ಅದನ್ನ ಅತ್ಯಂತ ಕಳಪೆ ಎಂದು ಪರಿಗಣಿಸಲಾಗುತ್ತೆ.
ದೆಹಲಿಯಲ್ಲಿ ಬೆಳಗ್ಗೆ ತೆಳುವಾದ ಮಂಜು ಗೋಚರವಾಗಿದೆ. ಮಾಲಿನ್ಯ ಹೆಚ್ಚುತ್ತಿರೋದ್ರಿಂದ ಜನರು ಉಸಿರಾಟ ಸಮಸ್ಯೆ ಎದುರಿಸುವಂತಾಗಿದೆ. ಈ ರೀತಿಯ ಹದಗೆಟ್ಟ ಗಾಳಿ ಮನುಷ್ಯರ ಆರೋಗ್ಯದ ಮೇಲೆ ತುಂಬಾನೇ ಪರಿಣಾಮ ಬೀರಲಿದೆ ಅಂತಾ ತಜ್ಞರು ಆತಂಕ ಹೊರಹಾಕಿದ್ದಾರೆ.
ಮುಂಬರುವ ದಿನಗಳಲ್ಲಿ ವಾಯು ಮಾಲಿನ್ಯ ಪ್ರಮಾಣ ನಿಯಂತ್ರಣ ಮಾಡುವ ಸಲುವಾಗಿ ದೆಹಲಿ ಪಾರ್ಕಿಂಗ್ ನೀತಿ ಅನುಷ್ಟಾನ ಸೇರಿದಂತೆ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳನ್ನ ಕಟ್ಟುನಿಟ್ಟಾಗಿ ಪಾಲಿಸುತ್ತೇವೆ ಅಂತಾ ಹೇಳಿದೆ.