ದೆಹಲಿಯ ರೋಹಿಣಿ ಪ್ರದೇಶದ 20 ತಿಂಗಳ ಬಾಲಕಿ ಧನಿಷ್ಠ ಸಾವಿನ ನಂತ್ರ ಅನೇಕರಿಗೆ ದೇವರಾಗಿದ್ದಾಳೆ. ಅತಿ ಕಡಿಮೆ ವಯಸ್ಸಿನ ಅಂಗಾಗ ದಾನಿಯಾಗಿದ್ದಾಳೆ ಧನಿಷ್ಠಾ. ಐದು ಮಂದಿಗೆ ಅಂಗಾಗ ನೀಡಿದ ಧನಿಷ್ಠಾ ಅವ್ರ ಜೀವ ಉಳಿಸಿದ್ದಾಳೆ.
ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ಮಗುವಿನ ಹೃದಯ, ಯಕೃತ್, ಮೂತ್ರಪಿಂಡ ಮತ್ತು ಎರಡು ಕಾರ್ನಿಯಾವನ್ನು ರೋಗಿಗಳಿಗೆ ಅಳವಡಿಸಲಾಗಿದೆ. ಜನವರಿ 8ರಂದು ಮನೆಯ ಒಂದನೇ ಮಹಡಿಯಲ್ಲಿ ಆಡ್ತಿದ್ದ ಧನಿಷ್ಠಾ ಕಾಲು ಜಾರಿ ಕೆಳಗೆ ಬಿದ್ದಿದ್ದಳು. ಅವಳನ್ನು ತಕ್ಷಣ ಗಂಗಾರಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಜನವರಿ 11ರಂದು ವೈದ್ಯರು ಧನಿಷ್ಠ ಮೆದುಳು ನಿಷ್ಕ್ರಿಯಗೊಂಡಿದೆ ಎಂದಿದ್ದರು. ಆದ್ರೆ ಉಳಿದೆಲ್ಲ ಅಂಗಗಳು ಕೆಲಸ ಮಾಡುತ್ತಿತ್ತು.
ಈ ದುಃಖದ ಮಧ್ಯೆಯೇ ತಾಯಿ ಬಬಿತಾ ಹಾಗೂ ತಂದೆ ಆಶಿಶ್ ಕುಮಾರ್ ಮಗುವಿನ ಅಂಗ ದಾನಕ್ಕೆ ಮುಂದಾಗಿದ್ದಾರೆ. ಆಸ್ಪತ್ರೆಯಲ್ಲಿದ್ದ ವೇಳೆ ಅನೇಕ ರೋಗಿಗಳನ್ನು ನೋಡಿದೆವು. ಅವರಿಗೆ ಅಂಗಗಳ ಅವಶ್ಯಕತೆಯಿತ್ತು. ನಾವು ಮಗುವನ್ನು ಕಳೆದುಕೊಂಡಿದ್ದೇವೆ. ಆದ್ರೆ ಉಳಿದವರ ಜೀವ ಉಳಿಯಲಿ ಎನ್ನುವ ಕಾರಣಕ್ಕೆ ಅಂಗಾಂಗ ದಾನ ಮಾಡ್ತಿದ್ದೇವೆ ಎಂದಿದ್ದಾರೆ.