ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿಲ್ಲದ ಚಳಿಯ ಅಬ್ಬರ..! 13-01-2021 1:04PM IST / No Comments / Posted In: Latest News, India ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಕೂಡ ಕನಿಷ್ಟ ತಾಪಮಾನ ದಾಖಲಾಗಿದೆ. ದೆಹಲಿಯ ವಿವಿಧ ನಗರಗಳಲ್ಲಿ 3.2 ಡಿಗ್ರಿ ಸೆಲ್ಸಿಯಸ್ನಷ್ಟು ತಾಪಮಾನ ದಾಖಲಾಗಿದೆ. ಕಾನ್ಪುರದಲ್ಲಿ ಕನಿಷ್ಟ 5 ಡಿಗ್ರಿ ಸೆಲ್ಸಿಯಸ್ ಹಾಗೂ ವಾರಣಾಸಿಯಲ್ಲಿ 6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ರಾಷ್ಟ್ರ ರಾಜಧಾನಿಯ ಸಫ್ದರ್ಜಂಗ್ ಹವಾಮಾನ ಕೇಂದ್ರದಲ್ಲಿ ಕನಿಷ್ಟ 3.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಈ ತಾಪಮಾನವು ಪ್ರತಿವರ್ಷದ ತಾಪಮಾನಕ್ಕಿಂತ ನಾಲ್ಕು ಡಿಗ್ರಿ ಸೆಲ್ಸಿಯಸ್ನಷ್ಟು ಕಡಿಮೆಯಾಗಿದೆ ಎಂದು ಪ್ರಾದೇಶಿಕ ಹವಾಮಾನ ಮುನ್ಸೂಚನೆ ಕೇಂದ್ರದ ಮುಖ್ಯಸ್ಥ ಕುಲದೀಪ್ ಶ್ರೀವಾತ್ಸವ್ ಹೇಳಿದ್ರು. ಉತ್ತರ ಭಾರತದ ಬಯಲು ಪ್ರದೇಶಗಳಲ್ಲಿ ಇದೇ ರೀತಿಯ ಚಳಿಯ ವಾತಾವರಣ ಮುಂದುವರಿಯಲಿದೆ ಎಂದು ಶ್ರೀವಾತ್ಸವ್ ಹೇಳಿದ್ದಾರೆ. Varanasi: People light fire to keep themselves warm as temperature drops in the city. Varanasi recorded a minimum temperature of 6 degree Celsius today. As per the IMD forecast, Varanasi will experience 'Fog/mist in the morning and mainly clear sky later' today. pic.twitter.com/L1EBtrTrwM — ANI UP/Uttarakhand (@ANINewsUP) January 13, 2021