alex Certify ಬರೋಬ್ಬರಿ 71 ವರ್ಷದ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ದಾಖಲೆ ಮಟ್ಟದ ಚಳಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 71 ವರ್ಷದ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ದಾಖಲೆ ಮಟ್ಟದ ಚಳಿ..!

ಬರೋಬ್ಬರಿ 71 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನವೆಂಬರ್​ ತಿಂಗಳ ಚಳಿಗಾಲ ಅತ್ಯಂತ ಭಯಾನಕ ಎನಿಸಿಕೊಂಡಿದೆ. ದೆಹಲಿಯಲ್ಲಿ ಈ ತಿಂಗಳು 10.2 ಡಿಗ್ರಿ ಸೆಲ್ಸಿಯಸ್​ಗೆ ತಾಪಮಾನ ಕುಸಿದಿದೆ.

1949ರ ನವೆಂಬರ್​ ತಿಂಗಳಲ್ಲಿ ದೆಹಲಿಯಲ್ಲಿ10.2 ಡಿಗ್ರಿಗೆ ತಾಪಮಾನ ಕುಸಿದಿತ್ತು. ಇದಾದ ಬಳಿಕ ಈ ಬಾರಿ ನವೆಂಬರ್​ನಲ್ಲಿ ಇಷ್ಟು ಚಳಿ ಕಾಣಿಸಿಕೊಂಡಿದೆ.

1938ರಲ್ಲಿ ದೆಹಲಿಯಲ್ಲಿ 9.6 ಡಿಗ್ರಿ ಸೆಲ್ಸಿಯಸ್​ಗೆ ತಾಪಮಾನ ಕುಸಿದಿತ್ತು. 1931ರಲ್ಲಿ 9 ಡಿಗ್ರಿ ಸೆಲ್ಸಿಯಸ್​ ಹಾಗೂ 1930ರಲ್ಲಿ 8.9 ಡಿಗ್ರಿ ಸೆಲ್ಸಿಯಸ್​ಗೆ ದೆಹಲಿ ತಾಪಮಾನ ಕುಸಿದಿತ್ತು ಅಂತಾ ಐಎಂಡಿ ದತ್ತಾಂಶ ಹೇಳಿದೆ.

ಪ್ರತಿ ವರ್ಷ ನವೆಂಬರ್​ ತಿಂಗಳಲ್ಲಿ ದೆಹಲಿ ತಾಪಮಾನ ಸರಿಸುಮಾರು 12 ಡಿಗ್ರಿ ಸೆಲ್ಸಿಯಸ್​ನಷ್ಟು ಇರುತ್ತಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...