ರಾಷ್ಟ್ರ ರಾಜಧಾನಿ ದೆಹಲಿ ಪೊಲೀಸರು ಯುವತಿ ಪ್ರಾಣ ಉಳಿಸಿ ಆಕೆಗೆ ಮದುವೆ ಮಾಡಿಸಿದ್ದಾರೆ. ಘಟನೆ ಗೋವಿಂದಪುರದಲ್ಲಿ ನಡೆದಿದೆ. ಯುವತಿ ಪ್ರೇಮಿ ಜೊತೆ ಜಗಳ ಮಾಡಿಕೊಂಡಿದ್ದಳಂತೆ. ಇದೇ ಕಾರಣಕ್ಕೆ ಆತ್ಮಹತ್ಯೆಗೆ ಮುಂದಾಗಿದ್ದಾಳೆ. ಗಾಯಗೊಂಡ ಯುವತಿಯನ್ನು ಪೊಲೀಸರು ರಕ್ಷಿಸಿದ್ದಾರೆ.
ಯುವತಿ ಹಾಗೂ ಆಕೆ ಪ್ರೇಮಿಯನ್ನು ಪೊಲೀಸ್ ಠಾಣೆಗೆ ಕರೆದು ಮದುವೆ ಮಾಡಿಸಿದ್ದಾರೆ. ಹಾಗೆ ಇಬ್ಬರಿಗೂ ಉಡುಗೊರೆ ಕೂಡ ನೀಡಿದ್ದಾರೆ. ಪೊಲೀಸ್ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಯುವತಿ ವರ್ಷಾಳನ್ನು ಮದುವೆಯಾಗಲು ಆಕೆ ಪ್ರೇಮಿ ಸನ್ನಿ ನಿರಾಕರಿಸಿದ್ದ. ಕುಟುಂಬದ ಮಧ್ಯೆಯೂ ಕೆಲ ಭಿನ್ನಾಭಿಪ್ರಾಯವಿತ್ತು.
ವರ್ಷಾ, ಸನ್ನಿ ಸಿಗ್ತಿಲ್ಲ ಎನ್ನುವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಳು. ಪೊಲೀಸರ ಸಮಕ್ಷಮದಲ್ಲಿ ಎರಡೂ ಕುಟುಂಬಗಳ ಮಧ್ಯೆ ಮಾತುಕತೆ ನಡೆಯಿತು. ಇಬ್ಬರೂ ನಂತ್ರ ಮದುವೆಗೆ ಒಪ್ಪಿದರು. ಅಕ್ಟೋಬರ್ 5ರಂದು ಪೊಲೀಸ್ ಠಾಣೆಯಲ್ಲಿಯೇ ಇಬ್ಬರ ಮದುವೆ ನಡೆಯಿತು.