ತನ್ನ 73 ವರ್ಷದ ಅಜ್ಜಿಯನ್ನ ಕೊಲೆ ಮಾಡಿದ ಆರೋಪದಡಿಯಲ್ಲಿ 19 ವರ್ಷದ ಯುವಕನನ್ನ ಬಂಧಿಸಲಾಗಿದೆ. ಹೊಸ ವರ್ಷಕ್ಕೆ ಪಾರ್ಟಿ ಮಾಡಲು ಹಣ ನೀಡಲ್ಲ ಎಂದಿದ್ದಕ್ಕೆ ಅಜ್ಜಿಯ ತಲೆ ಮೇಲೆ ಸುತ್ತಿಗೆಯಿಂದ ಹೊಡೆದು ಸಾಯಿಸಿದ್ದಾನೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ರು.
ಪೂರ್ವ ದೆಹಲಿಯ ಶಹದಾರಾದ ರೋಹ್ತಾಶ್ ನಗರದಲ್ಲಿ ವೃದ್ಧೆ ನಿವಾಸದ ಅಕ್ಕ ಪಕ್ಕದ ಮನೆಯವರು ಭಾನುವಾರ ರಾತ್ರಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ವೃದ್ಧೆ ಸತೀಶಾ ಜಾಲಿ ನಿವಾಸಕ್ಕೆ ಆಗಮಿಸಿದ್ದಾರೆ. ಆದರೆ ಕುರ್ಚಿಯ ಮೇಲೆ ಸತೀಶಾ ರಕ್ತ ಸಿಕ್ತರಾಗಿ ಕುಸಿದಿದ್ದರು.
ಸತೀಶಾ ಜಾಲಿ ಅವರ ಮೊಮ್ಮಗ ಕರಣ್ ಅಜ್ಜಿಗೆ ಹಣ ಕೊಡುವಂತೆ ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಪೀಡಿಸಲು ಆರಂಭಿಸಿದ್ದ. ಆದರೆ ಇದಕ್ಕೆ ಸತೀಶಾ ನಿರಾಕರಿಸಿದ ಕಾರಣ ಆಕೆಯ ತಲೆಗೆ ಸುತ್ತಿಗೆಯಿಂದ ಹೊಡೆದು 18 ಸಾವಿರ ರೂಪಾಯಿ ಕದ್ದು ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.