
ಮೈನವಿರೇಳಿಸುವ ಸ್ಟಂಟ್ ಒಂದನ್ನು ಮಾಡುತ್ತಿರುವ ನಾಲ್ವರು ಯುವಕರ ವಿಡಿಯೋವೊಂದು ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ.
ಲೆವೆಲ್ ಜಂಪ್ ಅಥ್ಲೀಟ್ ಝೋರಾವರ್ ಸಿಂಗ್ ತನ್ನ ಮೂವರು ಸ್ನೇಹಿತರೊಂದಿಗೆ ಸೇರಿಕೊಂಡು ಸ್ಕಿಪ್ಪಿಂಗ್ ಸ್ಟಂಟ್‌ಗಳನ್ನು ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಒಬ್ಬರ ಹೆಗಲ ಮೇಲೆ ಒಬ್ಬರು ಕುಳಿತು ಮಾಡುತ್ತಿರುವ ಈ ಸ್ಟಂಟ್ ಬೇರೆಯದ್ದೇ ಲೆವೆಲ್‌ನಲ್ಲಿದೆ. ಸ್ಕಿಪ್ಪಿಂಗ್ ಹಗ್ಗದೊಂದಿಗೆ ಇಷ್ಟೊಂದು ನಾಜೂಕಾಗಿ ಸ್ಟಂಟ್‌ಗಳನ್ನು ಮಾಡುತ್ತಿರುವ ಈ ರೋಮಾಂಚಕಾರಿ ಸ್ಟಂಟ್ ಅನ್ನು ನೋಡಿ ನಿಬ್ಬೆರಗಾಗುವುದೊಂದೇ ಬಾಕಿ.
ಆರು ವರ್ಷಗಳ ಕಾಲ ಸತತ ಪರಿಶ್ರಮದ ಫಲವಾಗಿ ಈ ಮಟ್ಟದಲ್ಲಿ ಜಂಪ್ ರೋಪ್ ಮಾಡುತ್ತಿರುವುದಾಗಿ ಝೋರಾವರ್ ಇನ್‌ಸ್ಟಾಗ್ರಾಂ ತಮ್ಮ ವಾಲ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿ, ಅದಕ್ಕೆ ಕ್ಯಾಪ್ಷನ್ ಹಾಕಿದ್ದಾರೆ.
https://www.instagram.com/p/CFjdlBxHzet/?utm_source=ig_web_copy_link