alex Certify ಹೊಸ ವರ್ಷಾಚರಣೆಗೆ ಹಣ ಹೊಂದಿಸಲು ದರೋಡೆ ಮಾಡಿದ ಭೂಪ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ವರ್ಷಾಚರಣೆಗೆ ಹಣ ಹೊಂದಿಸಲು ದರೋಡೆ ಮಾಡಿದ ಭೂಪ..!

ಹೊಸ ವರ್ಷದ ಸಂಭ್ರಮಾಚರಣೆಗಾಗಿ ಶಿಮ್ಲಾ ಪ್ರವಾಸಕ್ಕೆ ಹಣ ಹೊಂದಿಸೋಕೆ ದರೋಡೆ ಮಾಡಿದ ಆರೋಪದಡಿಯಲ್ಲಿ 22 ವರ್ಷದ ಹಾಲು ಮಾರಾಟಗಾರ ಮತ್ತಾತನ ಸ್ನೇಹಿತನನ್ನ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳನ್ನು ದೆಹಲಿಯ ಜಾಮಿಯಾ ನಗರ ನಿವಾಸಿಗಳಾದ ಫೈಜ್ ಅಹ್ಮದ್ ಸಿದ್ದಿಕಿ ಮತ್ತು ಮೊಹಮ್ಮದ್ ಸಾದಿಕ್ (21) ಎಂದು ಗುರುತಿಸಲಾಗಿದೆ.

ಬುಧವಾರ, ಓರ್ವ ವ್ಯಕ್ತಿಗೆ ಬೆದರಿಸಿ 1 ಲಕ್ಷ ರೂಪಾಯಿ ದೋಚಿದ ಬಳಿಕ ಆರೋಪಿಗಳು ಎಸ್ಕೇಪ್​ ಆಗಿದ್ದರು.

ಸಿದ್ದಿಕಿ​ ಹಾಗೂ ಆತನ ಸಹೋದರರನ್ನ ವಿಚಾರಣೆಗೆ ಒಳಪಡಿಸಿದ ವೇಳೆ ಶಿಮ್ಲಾಗೆ ತೆರಳಲು ಪ್ಲಾನ್​ ಮಾಡಿದ್ದ ಫೈಜ್​ ಬಳಿ ಹಣವಿರಲಿಲ್ಲ. ಹೀಗಾಗಿ ಸಾದಿಕ್ ಜೊತೆ ದರೋಡೆಗೆ ಯೋಜನೆಯನ್ನು ಹಾಕಿಕೊಂಡು ಹಣವನ್ನು ಅವನಿಗೆ ಒಪ್ಪಿಸಿದನು. ಸಾದಿಕ್​ನನ್ನ ಮನೆಯಿಂದ ಬಂಧಿಸಲಾಗಿದ್ದು, ಅವರ ಬಳಿ ₹ 65,000 ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...