
ನವದೆಹಲಿ: ವ್ಯಕ್ತಿಯೊಬ್ಬ ತನ್ನ ಸಹೋದ್ಯೋಗಿಯೊಬ್ಬನ ಬೆರಳು ಕಚ್ಚಿ ತುಂಡರಿಸಿದ ಘಟನೆ ದೆಹಲಿಯಲ್ಲಿ ನಡೆದಿದ್ದು, ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇನ್ಶುರೆನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹೇಮಂತ್ ಸಿದ್ಧಾರ್ಥ್ ಗುರುವಾರ ಕೆಲಸದ ನಿಮಿತ್ತ ತನ್ನ ಕಂಪನಿಯ ಮತ್ತೊಬ್ಬ ನೌಕರ ಮೋಹಿತ್ ನನ್ನು ಭೇಟಿಯಾಗಿದ್ದ. ಇಬ್ಬರೂ ಕಾರಿನಲ್ಲಿ ಕರೋಲ್ ಭಾಗ್ ಗೆ ತಮ್ಮ ಕೆಲಸಕ್ಕೆಂದು ಹೋಗುತ್ತಾರೆ.
ನಂತರ ಇಬ್ಬರೂ ಅಲ್ಲಿಂದ ಮಯೂರ್ ವಿಹಾರ್ ಎಂಬ ಜಾಗಕ್ಕೆ ಹೋಗುತ್ತಾರೆ. ಅಲ್ಲಿ ಸಿದ್ಧಾರ್ಥ್ ಗೆ ಕೆಲಸವಿತ್ತು, ಮತ್ತು ಆ ಕೆಲಸಕ್ಕೆ ಮೋಹಿತ್ ನ ಸಹಾಯ ಬೇಕಾಗಿತ್ತು. ಅದೇ ಸಮಯದಲ್ಲಿ ಇಬ್ಬರ ನಡುವೆ ಜಗಳ ಶುರುವಾಗಿದೆ. ಜಗಳದ ನಡುವೆ ಮೋಹಿತ್ ನ ತೋರು ಬೆರಳನ್ನು ಸಿದ್ಧಾರ್ಥ್ ಕಚ್ಚಿ ತುಂಡರಿಸಿದ್ದಾನೆ.
ಮೋಹಿತ್ ಹೇಗೋ ಅಲ್ಲಿಂದ ಕಾರಿನ ಬಾಗಿಲು ತೆಗೆದು ಹೊರಬಂದು ಪೊಲೀಸರಿಗೆ ಫೋನ್ ಮಾಡಿದ್ದಾನೆ. ಪೊಲೀಸರು ಸಿದ್ಧಾರ್ಥ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಮೋಹಿತ್ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶಸ್ತ್ರ ಚಿಕಿತ್ಸೆಯ ಮೂಲಕ ತಮ್ಮ ಬೆರಳನ್ನು ಮರು ಜೋಡಣೆ ಮಾಡಿಸಿಕೊಂಡಿದ್ದಾರೆ.
ಮುಂಬೈ ನಲ್ಲಿ ಸಹ ಇದೇ ರೀತಿಯ ಘಟನೆ 2019 ರಲ್ಲಿ ನಡೆದಿತ್ತು. ದೆಹಲಿಯಲ್ಲಿ 2018 ರಲ್ಲೂ ಒಬ್ಬ ಕುಡುಕ ಜಗಳದ ನಡುವೆ ಒಬ್ಬನ ಕಿವಿಯನ್ನು ಜಗಿದು ಹಾಕಿದ್ದ. ಜಿಂಬಾಬ್ವೆಯಲ್ಲಿ ಒಬ್ಬ ಮಹಿಳೆ ಕುಡಿದ ಅಮಲಿನಲ್ಲಿ ಗಂಡನ ಮರ್ಮಾಂಗವನ್ನೇ ಕಚ್ಚಿ ಸುದ್ದಿಯಾಗಿದ್ದಳು.