alex Certify ಕೊರೊನಾ ವರದಿ ʼಪಾಸಿಟಿವ್ʼ ಬರ್ತಿದ್ದಂತೆ ಯುವಕ ಮಾಡಿದ್ದಾನೆ ಇಂತ ಕೆಲಸ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ವರದಿ ʼಪಾಸಿಟಿವ್ʼ ಬರ್ತಿದ್ದಂತೆ ಯುವಕ ಮಾಡಿದ್ದಾನೆ ಇಂತ ಕೆಲಸ…!

रैपिड एंटीजन टेस्ट

ದೆಹಲಿಯ ಜಗತ್‌ಪುರಿ ಪ್ರದೇಶದಲ್ಲಿ ಕೊರೊನಾ ಪಾಸಿಟಿವ್ ವ್ಯಕ್ತಿಯೊಬ್ಬ ವೈದ್ಯೆ ಹಾಗೂ ನರ್ಸ್ ಮೇಲೆ ಹಲ್ಲೆ ನಡೆಸಿದ್ದಾನೆ. ಘಟನೆ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಯುವಕ ಹಿಂದಿನ ದಿನ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಂಡಿದ್ದನಂತೆ. ಆಗ ವರದಿ ನೆಗೆಟಿವ್ ಬಂದಿತ್ತು ಎನ್ನಲಾಗಿದೆ. ಇಲ್ಲಿ ಪಾಸಿಟಿವ್ ವರದಿ ಬರ್ತಿದ್ದಂತೆ ಯುವಕನ ಕೋಪ ನೆತ್ತಿಗೇರಿದೆ.

ವೈದ್ಯೆ ಮೇಲೆ ಹಲ್ಲೆ ನಡೆಸಿದ ಯುವಕ ಅಲ್ಲಿಂದ ಪರಾರಿಯಾಗಿದ್ದಾನೆ. ಯುವಕ ಹಲ್ಲೆ ನಡೆಸುತ್ತಿರುವುದು ಗೊತ್ತಾಗ್ತಿದ್ದಂತೆ ಸುತ್ತಮುತ್ತಲಿನವರು ವೈದ್ಯೆಯನ್ನು ರಕ್ಷಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ. ಸಿಸಿ ಟಿವಿ ಕ್ಯಾಮರಾ ಪರಿಶೀಲನೆ ನಡೆಸಲಾಗ್ತಿದೆ.

ಶಾನು ಎಂಬಾತನಿಗೆ ರ್ಯಾಪಿಡ್ ಪರೀಕ್ಷೆ ನಡೆಸಲಾಗಿತ್ತಂತೆ. ವರದಿ ಪಾಸಿಟಿವ್ ಬಂದಿದೆ. ಮರುದಿನ ಆಸ್ಪತ್ರೆಗೆ ಬಂದ ಶಾನು, ವೈದ್ಯೆ ರಾನಾ ಮತ್ತು ನರ್ಸ್ ಮೇಲೆ ಹಲ್ಲೆ ನಡೆಸಿದ್ದಾನೆ. ಸರ್ಕಾರಿ ಆಸ್ಪತ್ರೆ ವರದಿ ನೆಗೆಟಿವ್ ಬಂದಿದೆ. ಇಲ್ಲಿ ಪಾಸಿಟಿವ್ ವರದಿ ಬಂದಿದೆ ಎಂದು ಶಾನು ಕೂಗಾಡಿದ್ದನಂತೆ. ಆದ್ರೆ ಸರ್ಕಾರಿ ಆಸ್ಪತ್ರೆ ವರದಿಯನ್ನು ಶಾನು ತೋರಿಸಿಲ್ಲವೆಂದು ವೈದ್ಯೆ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...