ಅತ್ಯಾಚಾರ ಪ್ರಕರಣವೊಂದರಲ್ಲಿ ದೆಹಲಿ ಹೈಕೋರ್ಟ್ ಟ್ಯಾಟೂ ಆಧಾರದ ಮೇಲೆ ತೀರ್ಪು ನೀಡಿದೆ. ಮಹಿಳೆ ಕೈನಲ್ಲಿದ್ದ ಹಚ್ಚೆ ನೋಡಿ ಆರೋಪಿಗೆ ಜಾಮೀನು ನೀಡಿದೆ. ಬಲವಂತವಾಗಿ ಶಾರೀರಿಕ ಸಂಬಂಧ ಬೆಳೆಸಲಾಗಿಲ್ಲವೆಂದು ಕೋರ್ಟ್ ಹೇಳಿದೆ.
ಮಹಿಳೆಯೊಬ್ಬಳು 2016ರಿಂದ 2019ರವರೆಗೆ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ದೂರು ನೀಡಿದ್ದಳು. ಬೆದರಿಸಿ ಶಾರೀರಿಕ ಸಂಬಂಧ ಬೆಳೆಸಲಾಗಿದೆ ಎಂದು ಮಹಿಳೆ ಹೇಳಿದ್ದಳು. ಮೂರು ವರ್ಷಗಳ ಕಾಲ ಇಬ್ಬರ ಮಧ್ಯೆ ಪ್ರೀತಿಯಿತ್ತು. ಸಂಬಂಧ ಹಳಸಿದ ಮೇಲೆ ಇಬ್ಬರು ಬೇರೆಯಾಗಿದ್ದೆವು. ಆದ್ರೆ ಆ ನಂತ್ರ ನನ್ನ ಮೇಲೆ ಎಫ್ ಐ ಆರ್ ದಾಖಲಿಸಲಾಗಿತ್ತು ಎಂದು ಆರೋಪಿ ಹೇಳಿದ್ದ.
ಸಲಿಂಗಕಾಮಿಗಳಿಗೆ ಕೊಡಬಾರದ ಕಷ್ಟ ನೀಡಿದ ಕುಟುಂಬಸ್ಥರು….! ನ್ಯಾಯಕ್ಕಾಗಿ ಠಾಣೆ ಮೆಟ್ಟಿಲೇರಿದ ಸಂಗಾತಿ
ಹಾಗೆ ಮಹಿಳೆ ಕೈನಲ್ಲಿ ನನ್ನ ಹೆಸರಿನ ಹಚ್ಚೆಯಿದೆ. ಇಬ್ಬರು ಸಾಕಷ್ಟು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದೇವೆ. ಅನೇಕ ಕಾರ್ಯಕ್ರಮಗಳಿಗೆ ಒಟ್ಟಿಗೆ ಹೋಗಿದ್ದೇವೆ ಎಂದಿದ್ದ. ಇಬ್ಬರು ಫೇಸ್ಬುಕ್ ಮೂಲಕ ಸ್ನೇಹಿತರಾಗಿದ್ದೆವು ಎಂದು ಆರೋಪಿ ಹೇಳಿದ್ದಾನೆ. ಮಹಿಳೆ ಹಚ್ಚೆ ನೋಡಿದ ಕೋರ್ಟ್ ಇದನ್ನೇ ಸಾಕ್ಷಿಯಾಗಿ ತೆಗೆದುಕೊಂಡಿತು. ಆರೋಪಿಗೆ ಕೋರ್ಟ್ ಇದ್ರ ಆಧಾರದ ಮೇಲೆ ಜಾಮೀನು ನೀಡಿದೆ.