
ಇಡೀ ಸಮಾಜವೇ ಸಂಕಟಕ್ಕೆ ಸಿಲುಕಿದ ವೇಳೆ ತಮ್ಮ ಕೈಮೀರಿ ಪರೋಪಕಾರ ಮಾಡುವ ಬಹಳಷ್ಟು ಮಂದಿ ನಿಜವಾದ ಹೀರೋಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಲೇ ಇರುತ್ತೇವೆ.
ದೆಹಲಿಯ ಸೀತಾರಾಂ ಬಜಾರ್‌ನ ಸಂದೀಪ್ ಶರ್ಮಾ ಇಂಥ ಎಲೆಮರೆ ಕಾಯಿಗಳಲ್ಲಿ ಒಬ್ಬರು. 250 ಕೋವಿಡ್ ರೋಗಿಗಳಿಗೆ ತಮ್ಮದೇ ಖರ್ಚಿನಲ್ಲಿ ಊಟದ ವ್ಯವಸ್ಥೆ ಮಾಡಲು ಸಂದೀಪ್ ನಿರ್ಧರಿಸಿದ್ದು, ಉತ್ತರ ದೆಹಲಿಯ ಆಸ್ಪತ್ರೆಯೊಂದರ ಬಳಿ ತಮ್ಮ ಈ ಸೇವೆಯನ್ನು ಮಾಡುತ್ತಿದ್ದಾರೆ.
ಕೇಂದ್ರದಿಂದ ರಾಜ್ಯಕ್ಕೆ ಮತ್ತೊಂದು ಗುಡ್ ನ್ಯೂಸ್: 32 ಆಕ್ಸಿಜನ್ ಘಟಕ ಸ್ಥಾಪನೆ
ಬಜಾರಿನಲ್ಲಿ ಸಿಹಿ ತಿನಿಸುಗಳ ಅಂಗಡಿ ನಡೆಸುವ ಸಂದೀಪ್, ತಮ್ಮ ಗ್ರಾಹಕರಿಗೆ ಕೊಡುವ ಬಿಲ್ ಜೊತೆಗೆ ಮನವಿಯೊಂದನ್ನು ಮಾಡಿಕೊಂಡು, 250 ರೋಗಿಗಳಿಗೆ ಆಹಾರ ಒದಗಿಸಲು ತಗುಲುವ ಖರ್ಚನ್ನು ಭರಿಸಲು ಎಷ್ಟು ಮೊತ್ತ ಬೇಕಾಗುತ್ತದೆ ಎಂಬ ಅಂದಾಜಿರುವ ಲೆಕ್ಕವನ್ನು ಕೊಟ್ಟು, ತಮ್ಮ ಕೈಯಲ್ಲಿ ಆದಷ್ಟು ಸಹಾಯ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತಾರೆ.
ಅವರ ಈ ಮನವಿಪತ್ರದ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಸಹ ಸಂದೀಪ್ ಜೊತೆಗೆ ಕೈಜೋಡಿಸಲು ಆಸಕ್ತಿ ತೋರಿದ್ದಾರೆ.
