ನವದೆಹಲಿ: ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಬದಲು ಧಾನ್ಯಗಳನ್ನು ಮನೆಗೆ ನೀಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ. ಇದು ಎಲ್ಲ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಅನ್ವಯವಾಗಲಿದೆ.
ಕೋವಿಡ್ ಲಾಕ್ ಡೌನ್ ಕಾರಣಕ್ಕೆ ಕಳೆದ ಮಾರ್ಚ್ ನಿಂದ ದೇಶಾದ್ಯಂತ ಶಾಲೆಗಳು ಬಂದಾಗಿದ್ದವು. ಈಗ ಅ.15 ರಿಂದ ಕೆಲವೆಡೆ ಕೆಲವು ತರಗತಿಗಳು ಮಾತ್ರ ಪ್ರಾರಂಭವಾಗಿವೆ. ಆದರೆ, ದೆಹಲಿಯಲ್ಲಿ ಇನ್ನೂ ಶಾಲೆಗಳು ತೆರೆದಿಲ್ಲ.
ಮಾರ್ಚ್ ನಿಂದ ಇದುವರೆಗೆ ದೆಹಲಿ ವಿದ್ಯಾರ್ಥಿಗಳ ಪಾಲಕರ ಖಾತೆಗೆ ಬಿಸಿಯೂಟದ ಹಣ ಸಂದಾಯ ಮಾಡಲಾಗುತ್ತಿತ್ತು. ಈಗ ಪರಿಸ್ಥಿತಿ ಕೊಂಚ ಸುಧಾರಿಸಿದ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಮನೆಗೆ ಕೊಂಡೊಯ್ಯಲು ರೇಶನ್ ನೀಡಲಾಗುವುದು ಎಂದು ಸಿಎಂ ಕೇಜ್ರಿವಾಲ್ ಘೋಷಿಸಿದ್ದಾರೆ.