ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹೆಸರಿನಲ್ಲಿ ನಕಲಿ ವೆಬ್ಸೈಟ್ ರಚಿಸುವ ಮೂಲಕ 27000 ಸಾವಿರಕ್ಕೂ ಅಧಿಕ ಉದ್ಯೋಗಾಂಕ್ಷಿಗಳನ್ನ ವಂಚಿಸಿರೋದನ್ನ ದೆಹಲಿ ಪೊಲೀಸ್ ಸೈಬರ್ ಸೆಲ್ ಪತ್ತೆ ಮಾಡಿದೆ.
ಸ್ವಸ್ಥ ಅವಂ ಜನ ಕಲ್ಯಾಣ್ ಸಂಸ್ಥಾನ ಎಂಬ ನಕಲಿ ವೆಬ್ಸೈಟ್ನಲ್ಲಿ 13 ಸಾವಿರ ಉದ್ಯೋಗ ಖಾಲಿ ಇದೆ ಅಂತಾ ಮಾಹಿತಿ ಶೇರ್ ಮಾಡುವ ಮೂಲಕ ಜನರನ್ನ ವಂಚಿಸಲಾಗಿದೆ.
ಪ್ರಕರಣ ಸಂಬಂಧ ಐವರನ್ನ ಬಂಧಿಸಲಾಗಿದ್ದು ಬಂಧಿತರಿಂದ 3 ಲ್ಯಾಪ್ಟಾಪ್, 7 ಮೊಬೈಲ್ ಫೋನ್ ಹಾಗೂ 49 ಲಕ್ಷ ರೂ. ಹೊಂದಿರುವ ಬ್ಯಾಂಕ್ ಖಾತೆಯನ್ನ ಸೀಝ್ ಮಾಡಲಾಗಿದೆ.