ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶೀಘ್ರವೇ ಲಸಿಕೆ ಅಭಿಯಾನಕ್ಕೆ ಹೊಸ ಸೌಲಭ್ಯ ಸೇರ್ಪಡೆಗೊಳ್ಳಲಿದೆ. ಜನರು ವಾಹನದಲ್ಲಿ ಕುಳಿತೇ ಲಸಿಕೆ ಪಡೆಯಬಹುದಾಗಿದೆ. ಮೊದಲ ಡ್ರೈವ್-ಥ್ರೂ ವ್ಯಾಕ್ಸಿನೇಷನ್ ಸೆಂಟರ್ ದೆಹಲಿಯಲ್ಲಿ ಬುಧವಾರದಿಂದ ಪ್ರಾರಂಭವಾಗಲಿದೆ.
ದ್ವಾರಕಾದ ಆಕಾಶ್ ಹೆಲ್ತ್ ಕೇರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪರವಾಗಿ ಮೇ 26 ರಿಂದ ವೆಗಾಸ್ ಮಾಲ್ನಲ್ಲಿ ಲಸಿಕಾ ಕೇಂದ್ರ ಪ್ರಾರಂಭವಾಗಲಿದೆ. ಅಧಿಕಾರಿಗಳು ಸೋಮವಾರ ಈ ಮಾಹಿತಿಯನ್ನು ನೀಡಿದ್ದಾರೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೇ 26 ರಂದು ಬೆಳಿಗ್ಗೆ 11.30 ಕ್ಕೆ ಮೊದಲ ಡ್ರೈವ್ ಥ್ರೂ ವ್ಯಾಕ್ಸಿನೇಷನ್ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. 18-44 ವರ್ಷ ವಯಸ್ಸಿನವರಿಗೆ ಲಸಿಕೆ ನೀಡಲಾಗುವುದು. ಇದಕ್ಕಾಗಿ 30,000 ಡೋಸ್ ಕೋವಿಶೀಲ್ಡ್ ಲಸಿಕೆ ಖರೀದಿಸಲಾಗಿದೆ. ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಲಸಿಕೆ ನೀಡಲಾಗುವುದು.
ರಸ್ತೆಯಲ್ಲಿ ದಟ್ಟಣೆ ಇಲ್ಲದಂತೆ ನೋಡಿಕೊಳ್ಳುವ ಜವಾಬ್ದಾರಿಯಿದೆ. ಇದೇ ಕಾರಣಕ್ಕೆ ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಡ್ರೈವ್ ಥ್ರೂ ವ್ಯಾಕ್ಸಿನೇಷನ್ ಹಾಕಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ನಂತ್ರ ನಿಧಾನವಾಗಿ ಲಸಿಕೆ ಪ್ರಮಾಣವನ್ನು ದಿನಕ್ಕೆ 300ಕ್ಕೆ ಹೆಚ್ಚಿಸಲಾಗುವುದು ಎಂದವರು ಹೇಳಿದ್ದಾರೆ.