ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ಫ್ರಂಟ್ ಲೈನ್ ಕೊರೊನಾ ವಾರಿಯರ್ಸ್ ಎಂದು ಕರೆಯಲಾಗುತ್ತಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ರಕ್ಷಣಾ ಕವಚ ಹಾಕಿಕೊಂಡು ಕಾರ್ಯ ನಿರ್ವಹಿಸುವುದೇ ದೊಡ್ಡ ಸವಾಲು.
ಪಿಪಿಇ ಕಿಟ್ ಧರಿಸುವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ಕಷ್ಟಗಳ ವಿಡಿಯೋಗಳು ಜಾಲತಾಣಗಲ್ಲಿ ತುಂಬಿ ಹೋಗಿವೆ. ನವದೆಹಲಿ ಮೂಲದ ವೈದ್ಯ ಅಹೀದ್ ಖಾನ್ ಪಿಪಿಇ ಕಿಟ್ ಧರಿಸುವ ವಿಡಿಯೋವೊಂದನ್ನು ಇನ್ ಸ್ಟಾಗ್ರಾಂನಲ್ಲಿ ಹಾಕಿದ್ದು, ಅದನ್ನು ನೋಡಿದರೇ ಉಸಿರುಗಟ್ಟುವಂತಿದೆ.
ಅವರು ಮೊದಲು ಮಾಸ್ಕ್ ಧರಿಸುತ್ತಾರೆ. ಅದರ ಎಲ್ಲ ಸಂದಿಯಲ್ಲೂ ಗಮ್ ಟೇಪ್ ಹಚ್ಚಿ ಸಂಪೂರ್ಣ ಬಂದ್ ಮಾಡುತ್ತಾರೆ. ನಂತರ ಅದರ ಮೇಲೆ ಸರ್ಜಿಕಲ್ ಮಾಸ್ಕ್ ಧರಿಸುತ್ತಾರೆ. ಅದಾದ ನಂತರ ಕನ್ನಡಕ ಹಾಕಿ ಪಿಪಿ ಕಿಟ್ ಹಾಕಿ, ಜಾಗ ಬಿಡುವಲ್ಲೆಲ್ಲ ಗಮ್ ಟೇಪ್ ಹಚ್ಚುತ್ತಾರೆ. ನಂತರ ಫೇಸ್ ಶೀಲ್ಡ್ ಹಾಕುತ್ತಾರೆ. ಹ್ಯಾಂಡ್ ಗ್ಲೌಸ್ ಗೂ ಗಮ್ ಟೇಪ್ ಹಚ್ಚುತ್ತಾರೆ. “ಇದು ಎಂದೆಂದಿಗೂ ಅತ್ಯಂತ ಕೆಟ್ಟ ಮೇಕಪ್. ಇವನ್ನೆಲ್ಲ ಧರಿಸಲು ಕನಿಷ್ಟ 30 ನಿಮಿಷ ಬೇಕು. ಇದನ್ನು ನೋಡಿಯೇ ನಿಮಗೆ ಉಸಿರುಗಟ್ಟುತ್ತಿರಬಹುದು” ಎಂದು ಇನ್ಸ್ಟಾಗ್ರಾಂ ನಲ್ಲಿ ಬರೆದಿದ್ದಾರೆ.
https://www.instagram.com/p/CCCx4Enl-_r/?utm_source=ig_embed