alex Certify ಬೆಚ್ಚಿಬೀಳಿಸುವಂತಿದೆ ನವದೆಹಲಿಯ ಈ ಸ್ಟೋರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ನವದೆಹಲಿಯ ಈ ಸ್ಟೋರಿ

ದೆಹಲಿಯ ಎಲ್​ಎನ್​ಜೆಪಿ ಆಸ್ಪತ್ರೆಯಲ್ಲಿ ನಕಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿಯನ್ನ ಪೊಲೀಸರು ಬಂಧಿಸಿದ್ದಾರೆ. ವಿಶ್ವಜಿತ್ ಎಂಬ ವೈದ್ಯ ಈ ವ್ಯಕ್ತಿಯನ್ನ ತನ್ನ ಪರ ಕೆಲಸ ಮಾಡಲು ನೇಮಿಸಿಕೊಂಡಿದ್ದ ಎನ್ನಲಾಗಿದೆ. ಬಂಧಿತ ಆರೋಪಿ ದಿನಕ್ಕೆ 2 ಸಾವಿರ ರೂಪಾಯಿಯನ್ನ ವೇತನ ರೂಪದಲ್ಲಿ ಪಡೆಯುತ್ತಿದ್ದ .

ಬಂಧಿತ ವ್ಯಕ್ತಿಯನ್ನ ರಶೀದ್​ ಖಾನ್​ ಎಂದು ಗುರುತಿಸಲಾಗಿದೆ. ಈತ ಈ ಹಿಂದೆ ಆಸ್ಪತ್ರೆಯಲ್ಲೇ ಕೆಲಸ ಮಾಡಿದವನಾಗಿದ್ದರಿಂದ ಔಷಧಿಗಳ ಬಗ್ಗೆ ಕೊಂಚ ಜ್ಞಾನ ಸಂಪಾದಿಸಿದ್ದ.

ಹೀಗಾಗಿ ಈತ ಆಸ್ಪತ್ರೆಯಲ್ಲಿ ವಿಶ್ವಜಿತ್​ರಂತೆ ನಟಿಸುತ್ತಿದ್ದ ಎಂದು ತಿಳಿದು ಬಂದಿದೆ. ರಶೀದ್​ ಖಾನ್​ ನಡವಳಿಕೆ ನೋಡಿದ ಆಸ್ಪತ್ರೆ ಸಿಬ್ಬಂದಿ ಗುರುತಿನ ಚೀಟಿ ಕೇಳಿದ ಮೇಲೆ ಈತನ ಕಳ್ಳಾಟ ಬೆಳಕಿಗೆ ಬಂದಿದೆ.

ಗಂಭೀರ ಸ್ಥಿತಿಯಲ್ಲಿದ್ದ ರೋಗಿಗಳ ಚಿಕಿತ್ಸೆಗೂ ರಶೀದ್​ ಖಾನ್​ ಹಾಜರಾಗಿದ್ದನಂತೆ. ಯಾರಿಗೂ ತಾನು ವಿಶ್ವಜಿತ್​ ಅಲ್ಲ ಎಂಬ ಅನುಮಾನ ಬರಬಾರದು ಎಂಬ ಕಾರಣಕ್ಕೆ ಸದಾಕಾಲ ಮಾಸ್ಕ್​ ಧರಿಸುತ್ತಿದ್ದ ಹಾಗೂ ವೈದ್ಯರಂತೆ ಬಿಳಿ ಕೋಟ್​ ಸ್ಟೆತಾಸ್ಕೋಪ್ ಧರಿಸುತ್ತಿದ್ದ ಅಂತಾ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...