
ಬೇಲಿಯೇ ಎದ್ದು ಹೊಲ ಮೇಯುವಂಥ ನಿದರ್ಶನವೊಂದರಲ್ಲಿ, 160 ಕೆಜಿಯಷ್ಟು ಮಾರಿವಾನಾ ಮಾದಕ ದ್ರವ್ಯವನ್ನು ಜಪ್ತಿ ಮಾಡಿಕೊಂಡ ದೆಹಲಿ ಪೊಲೀಸರು, ಕೇವಲ ಒಂದು ಕೆಜಿಯಷ್ಟು ಪತ್ತೆ ಮಾಡಿರುವುದಾಗಿ ರಿಪೋರ್ಟ್ ಮಾಡಿ, ಮಿಕ್ಕಿದ್ದೆಲ್ಲವನ್ನೂ ಮಾರಾಟ ಮಾಡಿದ್ದಾರೆ.
ರಾಜಧಾನಿಯ ಜಹಂಗೀರ್‌ನಗರ ಪ್ರದೇಶದ ಇಬ್ಬರು ಸಬ್ ಇನ್ಸ್‌ಪೆಕ್ಟರ್‌ಗಳು ಹಾಗೂ ಇಬ್ಬರು ಕಾನ್ಸ್‌ಸ್ಟೇಬಲ್‌ಗಳು ಸೆಪ್ಟೆಂಬರ್ 11ರಂದು ಮಾಡಿದ ರೇಡ್‌ನಲ್ಲಿ 160 ಕೆಜಿ ಮಾರಿವಾನಾ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಡ್ರಗ್‌ಗಳನ್ನು ಹಂಚುತ್ತಿದ್ದ ಅನೀಲ್ ಎಂಬಾತನನ್ನು 1.5 ಲಕ್ಷ ಲಂಚ ಪಡೆದು ಬಿಟ್ಟುಬಿಟ್ಟಿದ್ದಾರೆ ಪೊಲೀಸರು.
ಅನೀಲ್ ಎಂಬಾತ ಒಡಿಶಾದಿಂದ ಈ ಮಾದಕ ದ್ರವ್ಯವನ್ನು ಪಡೆದುಕೊಂಡು ಬಂದಿದ್ದ.