
ಕೊರೊನಾ 2ನೆ ಅಲೆಯಿಂದಾಗಿ ಎಲ್ಲರೂ ತಮ್ಮ ಜೀವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಲಸಿಕೆಯೊಂದೇ ನಮ್ಮ ಬಳಿ ಇರುವ ಅಸ್ತ್ರವಾಗಿದ್ದು ಪ್ರತಿಯೊಬ್ಬರು ಲಸಿಕೆ ಪಡೆಯಲು ಕಾಯುತ್ತಿದ್ದಾರೆ.
ಇದೇ ರೀತಿ ಲಸಿಕೆ ಹಾಕಿಸಿಕೊಳ್ಳಬೇಕಿದ್ದ ವೃದ್ಧೆಯನ್ನ ಪೊಲೀಸ್ ಪೇದೆ ತಮ್ಮ ತೋಳಿನಲ್ಲಿ ಹೊತ್ತುಕೊಂಡೇ ಲಸಿಕಾ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಪೊಲೀಸ್ ಕಾನ್ಸ್ಟೇಬಲ್ ವೃದ್ಧೆಯನ್ನ ಹೊತ್ತುಕೊಂಡು ಹೋಗುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
ವೃದ್ದೆ ಶೈಲಾ ಡಿಸೋಜಾ ಎಂಬಾಕೆಯನ್ನ ಹೊತ್ತುಕೊಂಡು ಹೋದ ಪೊಲೀಸ್ ಪೇದೆಯನ್ನ ಕುಲ್ದೀಪ್ ಸಿಂಗ್ ಎಂದು ಗುರುತಿಸಲಾಗಿದೆ. ಫೋಟೋದಲ್ಲಿ ಪಿಪಿಇ ಕಿಟ್ ಧರಿಸಿದ್ದ ವೃದ್ಧೆಯನ್ನ ಕುಲ್ದೀಪ್ ಹೊತ್ತುಕೊಂಡು ಹೋಗಿದ್ದಾರೆ. ಈ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ನೆಟ್ಟಿಗರು ಪೊಲೀಸ್ ಪೇದೆಗೆ ಧನ್ಯವಾದ ಅರ್ಪಿಸಿದ್ದಾರೆ.
82 ವರ್ಷದ ಶೈಲಾ ನಿವೃತ್ತಿ ಹೊಂದಿದ ಇಂಗ್ಲೀಷ್ ಶಿಕ್ಷಕಿಯಾಗಿದ್ದರು. ಈಕೆಯನ್ನ ಹೊತ್ತುಕೊಂಡು ಬಂದಿದ್ದು ಮಾತ್ರವಲ್ಲದೇ ಲಸಿಕೆ ನೋಂದಣಿ ಸಮಯದಲ್ಲೂ ಕುಲದೀಪ್ ಸಹಾಯ ಮಾಡಿದ್ದಾರೆ.