ಓಎಲ್ಎಕ್ಸ್ ನಲ್ಲಿ ಹಳೆಯ ಸೋಫಾ ಮಾರಲು ಹೋಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪುತ್ರಿ ಮೋಸ ಹೋದ ಪ್ರಸಂಗ ನಡೆದಿದೆ. ಆನ್ ಲೈನ್ ವಂಚನೆ ವಿರುದ್ಧ ದೂರೂ ದಾಖಲಾಗಿದೆ.
ಹರ್ಷಿತಾ ಕೇಜ್ರಿವಾಲ್ ಅವರು ಒಎಲ್ಎಕ್ಸ್ ನಲ್ಲಿ ಹಳೆಯ ಸೋಫಾ ಒಂದನ್ನು ಮಾರಾಟಕ್ಕಿಟ್ಟಿದ್ದರು. ಇದನ್ನು ಗಮನಿಸಿದ ವ್ಯಕ್ತಿಯೊಬ್ಬ ವ್ಯವಹಾರ ಕುದುರಿಸಿದ್ದಾನೆ.
ಕ್ಯುಆರ್ ಕೋಡ್ ಕಳುಹಿಸಿದ ಆತ, ಸ್ಕ್ಯಾನ್ ಮಾಡಿದರೆ ಹಣ ಜಮೆಯಾಗುತ್ತದೆ ಎಂದಿದ್ದಾನೆ. ಇದನ್ನು ನಂಬಿದ ಹರ್ಷಿತಾ ಅದನ್ನು ಸ್ಕ್ಯಾನ್ ಮಾಡಿದ್ದಾರೆ.
ಸೆಲೆಬ್ರಿಟಿಗಳ ಟ್ವೀಟ್ ಕುರಿತು ʼಮಹಾʼ ಸರ್ಕಾರದಿಂದ ತನಿಖೆ
ಸ್ವಲ್ಪ ಸಮಯದ ನಂತರ ಹರ್ಷಿತಾ ಖಾತೆಯಿಂದ 20 ಸಾವಿರ ಒಮ್ಮೆಗೆ ಕಡಿತಗೊಂಡಿದ್ದು, ಬಳಿಕ 14 ಸಾವಿರ ರೂ. ಕಡಿತಗೊಂಡಿದೆ. ಒಟ್ಟಾರೆ 34 ಸಾವಿರ ರೂ. ಖೋತಾ ಆಗಿದ್ದು, ಮೋಸ ಹೋದದ್ದು ಅರಿವಿಗೆ ಬಂದಿದೆ. ತಕ್ಷಣವೇ ಸಿವಿಲ್ ಲೈನ್ ಪೊಲೀಸರಿಗೆ ದೂರು ನೀಡಿದ್ದು, ಆನ್ ಲೈನ್ ವಂಚಕನಿಗಾಗಿ ಶೋಧಕಾರ್ಯ ನಡೆದಿದೆ.