ದೆಹಲಿ ಮೂಲದ ಅಣಬೆ ಕೃಷಿಕರೊಬ್ಬರು ತಮ್ಮ ಫಾರಂನಲ್ಲಿ ಕೆಲಸ ಮಾಡುವ 10 ಮಂದಿಯನ್ನು ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಮರಳಿ ಅವರ ಊರಿಗೆ ಕಳುಹಿಸಲು ಫ್ಲೈಟ್ ಟಿಕೆಟ್ ವ್ಯವಸ್ಥೆ ಮಾಡಿದ್ದರು.
ಬಿಹಾರ ಮೂಲದ 10 ಮಂದಿಯನ್ನು ತಿಂಗಳುಗಳ ಹಿಂದೆ ಅವರ ಮನೆಗಳಿಗೆ ಕಳುಹಿಸಿದ್ದ ಪಪ್ಪನ್ ಸಿಂಗ್ ಇವರೊಂದಿಗೆ ಇನ್ನೂ 10 ಮಂದಿಯನ್ನು ಮರಳಿ ದೆಹಲಿಗೆ ಕರೆತರಲು ವ್ಯವಸ್ಥೆ ಮಾಡಿದ್ದಾರೆ.
ಇವರಿಗೆ ಟಿಕೆಟ್ ಬುಕ್ ಮಾಡಲು ಸಿಂಗ್ ಒಂದು ಲಕ್ಷ ರೂಪಾಯಿಗಳಿಗೂ ಹೆಚ್ಚು ದುಡ್ಡನ್ನು ವ್ಯಯಿಸಿದ್ದಾರೆ. ಆಗಸ್ಟ್-ಏಪ್ರಿಲ್ ಅವಧಿಯಲ್ಲಿ ಮತ್ತೆ ಬೇಸಾಯ ಮಾಡಲು ಈ ಕಾರ್ಮಿಕರು ಮರಳಿ ಬಂದಿದ್ದಾರೆ.
ಇವರ ಪೈಕಿ 10 ಕಾರ್ಮಿಕರು ಇದೇ ಮೊದಲ ಬಾರಿಗೆ ವಿಮಾನದಲ್ಲಿ ಹಾರಾಟ ಮಾಡುತ್ತಿದ್ದಾರೆ. ಇವರೆಲ್ಲಾ ಆಗಸ್ಟ್ 27ರಂದು ದೆಹಲಿಗೆ ಬಂದಿಳಿಯಲಿದ್ದು, ಇವರೆಲ್ಲಾ ದೆಹಲಿಯ ತಿಗಿಪುರ ಗ್ರಾಮದಲ್ಲಿ ಬಂದು ಕೆಲಸ ಮಾಡಲಿದ್ದಾರೆ.