ಉತ್ತರಾಖಂಡದಲ್ಲಿ ವಿಚಿತ್ರ ಘಟನೆ ನಡೆದಿದೆ. ಚುನಾವಣೆಗಾಗಿ ಸ್ನೇಹಿತನ ಪತ್ನಿಯನ್ನು ಎರವಲು ಪಡೆದಿದ್ದ ವ್ಯಕ್ತಿಯೊಬ್ಬ ಚುನಾವಣೆ ಗೆಲ್ಲುತ್ತಿದ್ದಂತೆ ಮಾತು ಮುರಿದಿದ್ದಾನೆ. ಸ್ನೇಹಿತನ ಪತ್ನಿಯನ್ನೇ ಮದುವೆಯಾಗಿದ್ದಾನೆ. ಆದ್ರೀಗ ಆತನ ವಿರುದ್ಧ ಮಹಿಳೆ ಕೋರ್ಟ್ ನಲ್ಲಿ ದೂರು ನೀಡಿದ್ದಾಳೆ.
ಸುಮಾರು ಎರಡು ವರ್ಷಗಳ ಹಿಂದೆ ಮೊರಾದಾಬಾದ್ ನಗರಪಂಚಾಯತ್ ಚುನಾವಣೆ ವೇಳೆ ಸ್ನೇಹಿತನ ಪತ್ನಿಯನ್ನು ಎರವಲು ಪಡೆದಿದ್ದ. ಬರೀ ದಾಖಲೆಗಾಗಿ ಪತ್ನಿ ಎರವಲು ಪಡೆದು ಆಕೆಯನ್ನು ಚುನಾವಣೆಗೆ ನಿಲ್ಲಿಸಿದ್ದ. ಚುನಾವಣೆ ನಂತ್ರ ಪತ್ನಿಯನ್ನು ವಾಪಸ್ ನೀಡುವಂತೆ ಮಾತಾಗಿತ್ತು. ಚುನಾವಣೆಯಲ್ಲಿ ಸ್ನೇಹಿತನ ಪತ್ನಿ ಗೆಲುವು ಸಾಧಿಸಿ ಅಧ್ಯಕ್ಷೆಯಾಗ್ತಿದ್ದಂತೆ ಸ್ನೇಹಿತ ಮಾತು ತಪ್ಪಿದ್ದ. ಮಹಿಳೆಯನ್ನು ವಾಪಸ್ ನೀಡಲು ನಿರಾಕರಿಸಿದ್ದ. ಆಕೆಯನ್ನು ಮದುವೆಯಾಗಿದ್ದ.
ಈ ಬಗ್ಗೆ ಮಹಿಳೆಯ ಮೊದಲ ಪತಿ ಕೋರ್ಟ್ ನಲ್ಲಿ ದೂರು ನೀಡಿದ್ದ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇಷ್ಟರ ಮಧ್ಯೆ ಎರಡನೇ ಪತಿ ಜೊತೆ ಅಧ್ಯಕ್ಷೆ ಗಲಾಟೆ ಮಾಡಿಕೊಂಡು ಸಹೋದರನ ಜೊತೆ ವಾಸ ಶುರು ಮಾಡಿದ್ದಳು. ಆದ್ರೆ ಮೊನ್ನೆ ಎರಡನೇ ಪತಿ ಹಾಗೂ ಮೈದುನ ಮನೆಗೆ ನುಗ್ಗಿ ಅತ್ಯಾಚಾರವೆಸಗಿದ್ದಾರೆಂದು ಆರೋಪ ಮಾಡಿದ್ದಾಳೆ.