ನವದೆಹಲಿ: ಸೈನಿಕ ಶಾಲೆಗಳಲ್ಲಿ ಒಬಿಸಿ ಮೀಸಲಾತಿ ನೀಡಲಾಗುತ್ತದೆ. ಇತರೆ ಹಿಂದುಳಿದ ಜಾತಿಗೆ ಶೇಕಡ 27 ರಷ್ಟು ಮೀಸಲಾತಿ ಕಲ್ಪಿಸಲಾಗುವುದು ಎಂದು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.
2021 -22ನೇ ಶೈಕ್ಷಣಿಕ ಸಾಲಿನಿಂದ ಒಬಿಸಿ –ಎನ್.ಸಿ.ಎಲ್. ಗೆ ಸೈನಿಕ ಶಾಲೆಗಳಲ್ಲಿ ಶೇಕಡ 27 ರಷ್ಟು ಮೀಸಲಾತಿ ನೀಡಲಾಗುತ್ತದೆ. ದೇಶದಲ್ಲಿ 31 ಸೈನಿಕ ಶಾಲೆಗಳಿದ್ದು ಶೇಕಡಾ 67 ರಷ್ಟು ಸೀಟುಗಳನ್ನು ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗುವುದು.
ಶೇಕಡ 33 ರಷ್ಟು ಸೀಟುಗಳನ್ನು ಬೇರೆ ರಾಜ್ಯದ ವಿದ್ಯಾರ್ಥಿಗಳಿಗೆ ನೀಡಲಿದ್ದು, ಎಸ್ಸಿಗೆ ಶೇಕಡ 15 ರಷ್ಟು, ಎಸ್.ಟಿ. ಶೇಕಡ 7.5 ರಷ್ಟು, ರಕ್ಷಣಾ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತ ಸೈನಿಕರ ಮಕ್ಕಳಿಗೆ ಶೇಕಡ 25 ರಷ್ಟು ಮೀಸಲಾತಿ ನೀಡಲಾಗಿದೆ.
ಇದರೊಂದಿಗೆ ಮುಂದಿನ ಶೈಕ್ಷಣಿಕ ಸಾಲಿನಿಂದ ಒಬಿಸಿ ವರ್ಗದವರಿಗೆ ಮೀಸಲಾತಿ ನೀಡಲಾಗುವುದು. ರಾಷ್ಟ್ರೀಯ ಮಾನದಂಡಗಳಿಗೆ ಅನುಸಾರವಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಸೂತ್ರಗಳಿಗೆ ಅನುಗುಣವಾಗಿ ಸೈನಿಕ ಶಾಲೆಗಳಲ್ಲಿ ಇತರೆ ಹಿಂದುಳಿದ ಜಾತಿಗೆ ಶೇಕಡ 27 ರಷ್ಟು ಮೀಸಲಾತಿ ನೀಡಲಾಗುತ್ತದೆ ಎಂದು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.