ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ಎತಾಹ್ ಜಿಲ್ಲೆಯಲ್ಲಿ ನಡೆದಿದೆ. 19 ವರ್ಷದ ಯುವತಿ ತನ್ನ ಗೆಳೆಯನ ಸಹಾಯದಿಂದ ಸ್ವಂತ ಅಪಹರಣ ನಾಟಕವಾಡಿದ್ದಾಳೆ. ತಂದೆಗೆ 1 ಕೋಟಿ ರೂಪಾಯಿ ಬೇಡಿಕೆಯಿಟ್ಟಿದ್ದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗುರುವಾರ ರಾತ್ರಿ ಯುವತಿ ನಾಪತ್ತೆಯಾಗಿದ್ದಾಳೆ. ಅಪಹರಣಕಾರನಾಗಿ ನಟಿಸಿರುವ ಯುವತಿ ಧ್ವನಿ ಬದಲಿಸಿ ಹೆತ್ತವರಿಗೆ ಕರೆ ಮಾಡಿದ್ದಾಳೆ. ಆತಂಕಕ್ಕೊಳಗಾದ ಕುಟುಂಬಸ್ಥರು ಪೊಲೀಸರಿಗೆ ಕರೆ ಮಾಡಿದ್ದಾರೆ.
ಯುವತಿಯ ನಿರಂತರ ಹಾಗೂ ದೀರ್ಘ ಕರೆಯಿಂದ ಅನುಮಾನಗೊಂಡ ಪೊಲೀಸರು ಯುವತಿ ಕರೆಯನ್ನು ಟ್ರ್ಯಾಕ್ ಮಾಡಿದ್ದಾರೆ. ಯುವತಿ ತನ್ನ ಫೋನ್ ನಿಂದಲೇ ಪಾಲಕರಿಗೆ ಕರೆ ಮಾಡ್ತಿದ್ದಾಳೆ ಎಂಬುದು ಗೊತ್ತಾಗಿದೆ. ಮನೆಯಿಂದ ಕೇವಲ ನೂರು ಮೀಟರ್ ದೂರದಲ್ಲಿ ಯುವತಿ ಪತ್ತೆಯಾಗಿದ್ದಾಳೆ. ಹುಡುಗಿ ಎರಡು ವರ್ಷದಿಂದ ಯುವಕನನ್ನು ಪ್ರೀತಿಸುತ್ತಿದ್ದಳು. ಆದ್ರೆ ಇದು ಮನೆಯವರಿಗೆ ಒಪ್ಪಿಗೆಯಿರಲಿಲ್ಲ. ಹಾಗೆ ಮನೆಯವರು 1 ಕೋಟಿ ಹಣ ಹೂಡಿಕೆ ಮಾಡಿ ಶಾಲೆ ತೆರೆಯುವ ಪ್ಲಾನ್ ಮಾಡಿದ್ದರು. ಇದನ್ನೇ ಯುವತಿ ಬಂಡವಾಳ ಮಾಡಿಕೊಂಡಿದ್ದಳು ಎನ್ನಲಾಗಿದೆ.