alex Certify ಶಾಕಿಂಗ್ ನ್ಯೂಸ್: ಸ್ಯಾನಿಟೈಸರ್ ಮಿಶ್ರಿತ ಮದ್ಯ ಸೇವಿಸಿ 5 ಮಂದಿ ಸಾವು, 3 ಮಹಿಳೆಯರು ಸೇರಿ 9 ಜನ ಗಂಭೀರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್ ನ್ಯೂಸ್: ಸ್ಯಾನಿಟೈಸರ್ ಮಿಶ್ರಿತ ಮದ್ಯ ಸೇವಿಸಿ 5 ಮಂದಿ ಸಾವು, 3 ಮಹಿಳೆಯರು ಸೇರಿ 9 ಜನ ಗಂಭೀರ

ಪಾಲಕ್ಕಾಡ್: ಕೇರಳದ ಪಾಲಕ್ಕಾಡ್ ನಲ್ಲಿ ಸ್ಯಾನಿಟೈಸರ್ ಮಿಶ್ರಣ ಮಾಡಿದ್ದ ಮದ್ಯ ಸೇವಿಸಿ ಐವರು ಸಾವನ್ನಪ್ಪಿದ್ದಾರೆ.

ಕಾಂಜಿ ಕೋಡ್ ನ ಚೆಲ್ಲನಕಾವು ಬುಡಕಟ್ಟು ಸಮುದಾಯದ ಕಾಲೋನಿಯಲ್ಲಿ ಘಟನೆ ನಡೆದಿದ್ದು ರಾಮನ್(52), ಅಯ್ಯಪ್ಪನ್(55) ಆತನ ಮಗ ಅರುಣ್(22), ಶಿವನ್(45) ಮತ್ತು ಆತನ ಸಹೋದರ ಮೂರ್ತಿ(33) ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಮೂವರು ಮಹಿಳೆಯರು ಸೇರಿದಂತೆ 9 ಮಂದಿಯ ಸ್ಥಿತಿ ಗಂಭೀರವಾಗಿದ್ದು ಪಾಲಕ್ಕಾಡ್ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. ಸ್ಯಾನಿಟೈಸರ್ ಮಿಶ್ರಿತವಾಗಿದ್ದ ಮದ್ಯವನ್ನು ಇವರು ಸೇವಿಸಿದ್ದಾರೆ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.

ಭಾನುವಾರ ರಾಮನ್ ಸಾವನ್ನಪ್ಪಿದ್ದು ನಂತರದಲ್ಲಿ ಉಳಿದವರು ಮೃತಪಟ್ಟಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಮದ್ಯ ಸೇವನೆಯ ನಂತರ ತೀವ್ರ ಅಸ್ವಸ್ಥರಾದ ನಾಲ್ವರು ಸೋಮವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...