ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟವರ ಬಗ್ಗೆ ಹಬ್ಬುತ್ತಿರುವ ಊಹಾಪೋಹಗಳಿಗೆ ಅಂತ್ಯ ಹಾಡಲು ಮುಂದಾದ ವೈದ್ಯರು ಹಾಗೂ ತಜ್ಞರು ಜನರಲ್ಲಿ ಅರಿವು ಮೂಡಿಸುವ ಹೇಳಿಕೆಗಳನ್ನು ನೀಡಿದ್ದಾರೆ. ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರಗಳಲ್ಲಿ ಭಾಗಿಯಾಗುವವರು ವಿಪರೀತ ಗಾಬರಿಯಿಂದ PPEಗಳನ್ನು ಧರಿಸುತ್ತಿರುವುದನ್ನು ಕಾಣಬಹುದಾಗಿದೆ.
ಕೊರೊನಾ ವೈರಸ್ ಸೋಂಕಿತರು ಕೆಮ್ಮಿದಾಗ ಅಥವಾ ಸೀನಿದಾಗ ಹೊರಹೊಮ್ಮುವ ತೇವಾಂಶದ ಮೂಲಕ ಚಲಿಸುತ್ತವೆ. ಆದರೆ ಮೃತಪಟ್ಟ ದೇಹ ಸೀನಲು ಅಥವಾ ಕೆಮ್ಮಲು ಸಾಧ್ಯವಿಲ್ಲದ ಕಾರಣದಿಂದ ಅವುಗಳಿಂದ ವೈರಸ್ ಹಬ್ಬುವ ಸಾಧ್ಯತೆಗಳು ಇಲ್ಲ ಎಂದು ತಿಳಿಸಲಾಗಿದೆ.
ಖುದ್ದು ICMR ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ, ಕೊರೊನಾ ವೈರಸ್‌ನಿಂದ ಮೃತಪಟ್ಟ ವ್ಯಕ್ತಿಯ ದೇಹದಲ್ಲಿರುವ ವೈರಾಣುಗಳ ಪ್ರಭಾವ ತಗ್ಗಿರುವ ಕಾರಣ ಸೋಂಕು ಹಬ್ಬುವ ಸಾಧ್ಯತೆಗಳು ಇರುವುದಿಲ್ಲ. ಅಂತ್ಯ ಸಂಸ್ಕಾರದಲ್ಲಿ ಭಾಗಿಯಾದವರು ಸೋಪ್ ಹಾಕಿಕೊಂಡು ಚೆನ್ನಾಗಿ ಸ್ನಾನ ಮಾಡಿದರೆ ಸಾಕು ಎಂದು ತಿಳಿದುಬಂದಿದೆ.