ಬ್ರಿಟನ್ ಮೂಲದ ಆಸ್ಟ್ರಾಝೆನೆಕಾ ಫಾರ್ಮಾ ಕಂಪನಿ ಕೊರೊನಾ ಲಸಿಕೆ ಪ್ರಯೋಗವನ್ನು ಬೇರೆ ದೇಶಗಳಲ್ಲಿ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಮೂರನೇ ಹಂತದ ಪ್ರಯೋಗಕ್ಕೆ ನೇಮಕಾತಿಯನ್ನು ಮುಂದಿನ ಆದೇಶದವರೆಗೆ ರದ್ದುಗೊಳಿಸಬೇಕೆಂದು ಸೇರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಆದೇಶಿಸಿದೆ.
ಆಕ್ಸ್ ಫರ್ಡ್ ವಿಶ್ವವಿದ್ಯಾಲಯದೊಂದಿಗೆ ಕೊರೊನಾ ಲಸಿಕೆ ಪ್ರಯೋಗ ಕೈಗೊಂಡಿರುವ ಸೇರಂ ಇನ್ಸ್ಟಿಟ್ಯೂಟ್ ಗೆ ಸೂಚನೆ ನೀಡಲಾಗಿದ್ದು ಈಗಾಗಲೇ ಪ್ರಯೋಗದಲ್ಲಿ ಬಳಕೆ ಮಾಡಿರುವ ಲಸಿಕೆಯ ಸುರಕ್ಷತೆ ಕುರಿತು ನಿಗಾ ವಹಿಸಬೇಕೆಂದು ಸೂಚಿಸಲಾಗಿದೆ. ಮುಂದಿನ ಹಂತದ ಪ್ರಯೋಗಕ್ಕೆ ನೇಮಕಾತಿಗೆ ಮೊದಲು ಅನುಮತಿ ಪಡೆಯಬೇಕು ಎಂದು ಹೇಳಲಾಗಿದೆ.
ಇಂಗ್ಲೆಂಡ್ ನ ದತ್ತಾಂಶ ಮತ್ತು ಸುರಕ್ಷತೆ ನಿರ್ವಹಣೆ ಮಂಡಳಿಯಿಂದ ಅನುಮೋದನೆ ಪಡೆದ ಬಗ್ಗೆ ಮಾಹಿತಿಯನ್ನು ಸಲ್ಲಿಸಬೇಕೆಂದು ತಿಳಿಸಲಾಗಿದೆ. ಆಸ್ಟ್ರಾಝೆನಿಕಾ ಲಸಿಕೆಯ ಪ್ರಾಯೋಗಿಕ ಪರೀಕ್ಷೆಯನ್ನು ನಿಲ್ಲಿಸಿದೆ. ಆದರೆ ಭಾರತದಲ್ಲಿ ಸೇರಂ ಇನ್ಸ್ಟಿಟ್ಯೂಟ್ ಪ್ರಯೋಗ ಮುಂದುವರೆಸಿತ್ತು. ಈ ಬಗ್ಗೆ ಮಾಹಿತಿ ಪಡೆದ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಸೂಚನೆ ನೀಡಿದ್ದು, ನಂತರ ಲಸಿಕೆ ಪ್ರಯೋಗವನ್ನು ಸ್ಥಗಿತಗೊಳಿಸುವುದಾಗಿ ಸೇರಂ ಇನ್ ಸ್ಟಿಟ್ಯೂಟ್ ನಿರ್ಧರಿಸಿದೆ ಎಂದು ಹೇಳಲಾಗಿದೆ.