ಮುಂಬೈ ಪೊಲೀಸರು ಕೊರೊನಾ ಜಾಗೃತಿಗೆ ಸಾಕಷ್ಟು ಕ್ರಿಯಾಶೀಲ ವಿಡಿಯೋ – ಫೋಟೋಗಳನ್ನು ಮಾಡಿ ಹರಿಬಿಡುತ್ತಿದ್ದಾರೆ. ಹೊಸತನದ ಕಾರಣ ಪೊಲೀಸರ ಜಾಗೃತಿ ಸಂದೇಶಗಳು ಬೇಗನೇ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಪರಸ್ಪರ ಅಂತರದ ಮಹತ್ವ ತಿಳಿಸಲು ಪೊಲೀಸರು ಈಗ ಹೊಸದೊಂದು ಫೋಟೋವನ್ನು ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.
“ಹ್ಯಾವಂಟ್ ಎ ಕ್ಲು..? ಲೆಟ್ಸ್ ಪ್ಲೇ ಎ ಗೇಮ್ ಜಸ್ಟ್ ಮಿ ಎಂಡ್ ಯು” (ಯಾವುದೇ ಸೂಚನೆ ಇಲ್ಲದೆ ನೀನು ಮತ್ತು ನನ್ನ ನಡುವೆ ಒಂದು ಆಟ ನಡೆಯಲಿ) ಎಂದು ಪತ್ರವೊಂದರಲ್ಲಿ ಬರೆಯಲಾಗಿದೆ. ಅದರ ಕೆಳಗೆ ಒಬ್ಬ ಪುರುಷ ಹಾಗೂ ಒಬ್ಬ ಮಹಿಳೆ ಅಂತರದಲ್ಲಿ ಇರುವ ಚಿತ್ರ ಬಿಡಿಸಿ ಇಬ್ಬರ ಬಳಿಯೂ ಮಾಸ್ಕ್ ಇಡಲಾಗಿದೆ.
ಹಾಲಿವುಡ್ ನ ಪ್ರಸಿದ್ಧ ರಾಬರ್ಟ್ ಪ್ಯಾಟ್ಸನ್ ಅವರ ಬ್ಯಾಟ್ ಮ್ಯಾನ್ ಚಿತ್ರದ ಡೈಲಾಗ್ ಅದಾಗಿದೆ. ಅದನ್ನು ಮುಂಬೈ ಪೊಲೀಸರು ಕೊರೊನಾ ಜಾಗೃತಿಗೆ ಬಳಸಿಕೊಂಡಿದ್ದು, ನೆಟ್ಟಿಗರ ಮೆಚ್ಚುಗೆಗೆ ಕಾರಣವಾಗಿದೆ.
ಆದರೆ, ಕೆಲವರು ಮುಂಬೈ ಪೊಲೀಸರ ಕಾರ್ಯಕ್ಕೆ ಟೀಕೆಯನ್ನೂ ವ್ಯಕ್ತಪಡಿಸಿದ್ದಾರೆ. “ಇದು ಬ್ಯಾಟ್ ಮ್ಯಾನ್ ಚಿತ್ರದ ಅಪರಾಧದ ಸನ್ನಿವೇಶದ ಡೈಲಾಗ್” ಎಂದು ಒಬ್ಬರು ಸೂಚ್ಯವಾಗಿ ಹೇಳಿದ್ದಾರೆ. ಇನ್ನೊಬ್ಬರು ” ಮೂವರು ವ್ಯಕ್ತಿಗಳು ಮಾದಕ ದ್ರವ್ಯ ಸೇವನೆ ಮಾಡಿ ನಶೆಯಲ್ಲಿರುವ ಫೋಟೋ ಹಾಕಿ “ಮುಂಬೈ ಪೊಲೀಸ್ ಇತ್ತೀಚೆಗೆ ಈ ರೀತಿ ಆಗಿದೆ” ಎಂದು ಪ್ರತಿಕ್ರಿಯಿಸಿದ್ದಾರೆ.
https://twitter.com/MumbaiPolice/status/1297737949618962434?ref_src=twsrc%5Etfw%7Ctwcamp%5Etweetembed%7Ctwterm%5E1297737949618962434%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fdc-fan-dome-mumbai-police-use-still-from-robert-pattinsons-batman-to-spread-corona-awareness-2814247.html