ಕೊರೊನಾ ಲಸಿಕೆಯ ಎರಡೂ ಡೋಸ್ಗಳನ್ನ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಜಿಲ್ಲಾಧಿಕಾರಿ ಸೋಂಕಿಗೆ ಒಳಗಾದ ಘಟನೆ ಛತ್ತೀಸ್ಘಡದ ರಾಯ್ಪುರದಲ್ಲಿ ನಡೆದಿದೆ. ಈ ಘಟನೆ ಬಳಿಕ ಕೊರೊನಾ ಲಸಿಕೆಯ ಸಾಮರ್ಥ್ಯದ ಮೇಲೆ ಮತ್ತೊಮ್ಮೆ ಸಂಶಯ ಹುಟ್ಟುವಂತೆ ಆಗಿದೆ.
ಜಂಜ್ಗೀರ್ – ಚಂಪಾ ಜಿಲ್ಲೆಯ ಜಿಲ್ಲಾಧಿಕಾರಿ ಯಶವಂತ್ ಕುಮಾರ್ಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಸಬಂಧ ಯಶವಂತ್ ಮಾಹಿತಿಯನ್ನ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನನ್ನ ಜೊತೆ ಸಂಪರ್ಕಕ್ಕೆ ಬಂದವರು ಎಚ್ಚರದಿಂದ ಇರಿ ಎಂದು ಟ್ವಿಟರ್ ಮೂಲಕ ಯಶವಂತ್ ಮನವಿ ಮಾಡಿದ್ದಾರೆ.
ಆದರೆ ವಿಚಿತ್ರ ಅಂದರೆ, ಕಳೆದ ವಾರವಷ್ಟೇ ಯಶವಂತ್ ಕುಮಾರ್ ಕೊರೊನಾ ಲಸಿಕೆಯ ಕೊನೆಯ ಡೋಸ್ನ್ನು ಪಡೆದಿದ್ದರು. ಆದರೆ ಇದೀಗ ಅವರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಯಾವುದೇ ರೋಗ ಗುಣಲಕ್ಷಣಗಳನ್ನ ಯಶವಂತ್ ಕುಮಾರ್ ಹೊಂದಿಲ್ಲ.
ಮಾಧ್ಯಮಗಳು ನೀಡಿರುವ ಮಾಹಿತಿ ಪ್ರಕಾರ ಯಶವಂತ್ ಕುಮಾರ್ ಫೆಬ್ರವರಿ 8ನೇ ತಾರೀಖಿನಂದು ತಮ್ಮ ಮೊದಲನೇ ಡೋಸ್ನ್ನು ಸ್ವೀಕರಿಸಿದ್ದರು. ಇದಾದ ಬಳಿಕ ಮಾರ್ಚ್ 8ನೇ ತಾರೀಖಿನಂದು ಎರಡನೇ ಡೋಸ್ನ್ನು ಪಡೆದಿದ್ದಾರೆ. ಇದಾದ ಬಳಿಕ ನಡೆಸಲಾದ ಆರ್ಟಿ – ಪಿಸಿಆರ್ ಟೆಸ್ಟ್ನಲ್ಲಿ ಯಶವಂತ್ ಕುಮಾರ್ ಸೋಂಕಿಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ.
ಯಶವಂತ್ ಕುಮಾರ್ ಸೋಂಕಿಗೆ ಒಳಗಾಗುತ್ತಿದ್ದಂತೆಯೇ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿಯನ್ನ ಪರೀಕ್ಷೆಗೆ ಒಳಪಡಿಸಲಾಗಿದ್ದು ಎಲ್ಲರ ವರದಿ ನೆಗೆಟಿವ್ ಬಂದಿದೆ. ಕುಮಾರ್ ಇದೀಗ ಹೋಂ ಐಸೋಲೇಷನ್ನಲ್ಲಿ ಇದ್ದಾರೆ.