ಕೃಷಿ ಸುಧಾರಣಾ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ರೈತರ ಹೋರಾಟವೀಗ ದಿಲ್ಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದತ್ತ ಹೊರಳುತ್ತಿದೆ.
ಗಣರಾಜ್ಯೋತ್ಸವದ ಒಳಗಾಗಿ ತಮ್ಮ ಬೇಡಿಕೆ ಈಡೇರಿಸದಿದ್ದರೆ, ಅದೇ ದಿನ ಟ್ರ್ಯಾಕ್ಟರ್ ಗಳನ್ನು ದಿಲ್ಲಿಯ ರಸ್ತೆಗಳಿಗೆ ಇಳಿಸಲು ತಾಲೀಮು ನಡೆದಿದೆ. ಅದರಲ್ಲೂ ರೈತ ಮಹಿಳೆಯರು ತಮ್ಮ ಶಕ್ತಿ ಪ್ರದರ್ಶನಕ್ಕೆ ಅಣಿಯಾಗುತ್ತಿದ್ದಾರೆ.
ಹರಿಯಾಣದಲ್ಲಿ ರೈತ ಹೆಣ್ಣು ಮಕ್ಕಳಿಗೆ ಟ್ರ್ಯಾಕ್ಟರ್ ಚಾಲನೆ ಬಗ್ಗೆ ಬಹುದೊಡ್ಡ ಸಂಖ್ಯೆಯಲ್ಲಿ ತರಬೇತಿ ಕೊಡಲಾಗುತ್ತಿದ್ದು, ಜಿಂದ್ – ಪಟಿಯಾಲ ಹೆದ್ದಾರಿಯಲ್ಲಿ ರೈತ ಮಹಿಳೆಯರು ಟ್ರ್ಯಾಕ್ಟರ್ ಪರೇಡ್ ನಡೆಸಿದರು.