ಪಾಟ್ನಾದ ಗ್ರಾಮವೊಂದರಲ್ಲಿ ಆಘಾತಕಾರಿ ಘಟನೆ ನಡೆದಿದೆ. ಸೊಸೆಯೊಬ್ಬಳು ಅತ್ತೆ ಹತ್ಯೆ ಮಾಡಿ ಆಕೆ ಕಣ್ಣು ಕಿತ್ತಿದ್ದಾಳೆ. 55 ವರ್ಷದ ಅತ್ತೆ ಹತ್ಯೆ ಮಾಡಿದ ಸೊಸೆ ನಂತ್ರ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. 33 ವರ್ಷದ ಲಲಿತಾ ದೇವಿ ಅತ್ತೆ ಧರ್ಮಶೀಲಾ ದೇವಿ ಹತ್ಯೆ ಮಾಡಿದ್ದಾಳೆ. ಅತ್ತೆ ಹತ್ಯೆ ಮಾಡುವ ವೇಳೆ ಪತಿ ಮನೆಯಲ್ಲಿರಲಿಲ್ಲವಂತೆ. ಅತ್ತೆ ಹತ್ಯೆ ನಂತ್ರ ಲಲಿತಾ ದೇವಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಮುಂದಾಗಿದ್ದಾಳೆ. ಶೇಕಡಾ 40ರಷ್ಟು ಸುಟ್ಟು ಹೋಗಿರುವ ಲಲಿತಾ ದೇವಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾರ್ವಜನಿಕ ಶೌಚಾಲಯದಲ್ಲಿ ಮೊಟ್ಟೆ, ಮಾಂಸ ಮಾರಾಟ..!
ಕಳೆದ ಕೆಲ ದಿನಗಳಿಂದ ಅತ್ತೆ-ಸೊಸೆ ಮಧ್ಯೆ ಗಲಾಟೆ ನಡೆಯುತ್ತಿತ್ತಂತೆ. ಲಲಿತಾ ದೇವಿಗೆ ಮಗು ಆಗಿರಲಿಲ್ಲವಂತೆ. ಇದೇ ಕಾರಣಕ್ಕೆ ಅತ್ತೆ ಹಿಂಸೆ ನೀಡ್ತಿದ್ದಳಂತೆ. ಅತ್ತೆ ಕಾಟಕ್ಕೆ ಬೇಸತ್ತಿದ್ದ ಲಲಿತಾ ದೇವಿ ಅತ್ತೆ ಹತ್ಯೆಗೆ ಮುಂದಾಗಿದ್ದಾಳೆ. ಹತ್ಯೆ ನಂತ್ರವೂ ಕೋಪ ತಣಿಯದ ಕಾರಣ ಕಣ್ಣು ಕಿತ್ತಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.