alex Certify 23 ವರ್ಷ ಹಿಂದಿನ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಶಿಕ್ಷಕ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

23 ವರ್ಷ ಹಿಂದಿನ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಶಿಕ್ಷಕ ಅರೆಸ್ಟ್

ಡಾರ್ಜಿಲಿಂಗ್‌: ವಿದ್ಯಾರ್ಥಿನಿ ಮೇಲೆ 23 ವರ್ಷಗಳ ಹಿಂದೆ ಲೈಂಗಿಕ ದೌರ್ಜನ್ಯ ಎಸಗಿದ್ದ ಶಿಕ್ಷಕನನ್ನು ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ್ದಾರೆ. ಅ.23 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜಿತೇಶ್ ಓಝಾ (46) ಬಂಧಿತ ಆರೋಪಿ.

ಹಾಂಕಾಂಗ್ ನಲ್ಲಿ ನೆಲೆಸಿರುವ 37 ವರ್ಷದ ಮಹಿಳೆ 23 ವರ್ಷಗಳ ಹಿಂದೆ ತನ್ನ ಶಿಕ್ಷಕ ನೀಡಿದ್ದ ಲೈಂಗಿಕ ಕಿರುಕುಳದ ವಿರುದ್ಧ ಇ-ಮೇಲ್ ಮೂಲಕ ಸಾದರ್ ಪೊಲೀಸರಿಗೆ 2019 ರ ಸೆಪ್ಟೆಂಬರ್ ನಲ್ಲಿ ದೂರು ಸಲ್ಲಿಸಿದ್ದರು.

ದೂರಿನ ಬೆನ್ನತ್ತಿ ಹೋದ ಪೊಲೀಸರಿಗೆ ಸರಿಯಾದ ಸುಳಿವೇ ಸಿಕ್ಕಿರಲಿಲ್ಲ. ಆತನ ಜೊತೆಗೆ ಕೆಲಸ ಮಾಡಿದವರೆಲ್ಲರೂ ಒಳ್ಳೆಯ ಅಭಿಪ್ರಾಯಗಳನ್ನೇ ಹೇಳಿದ್ದರು. ಪ್ರಕರಣ ಕೈಬಿಡಬೇಕೆಂಬ ನಿರ್ಧಾರಕ್ಕೆ ಬಂದಿದ್ದ ಪೊಲೀಸರು, ಹಾಂಕಾಂಗ್ ನಲ್ಲಿದ್ದಾಕೆಯನ್ನು ಸಂಪರ್ಕಿಸಿದಾಗ, ಇದೇ ರೀತಿ ದೌರ್ಜನ್ಯಕ್ಕೆ ಒಳಗಾದವರ ಮಾಹಿತಿ ಸಿಕ್ಕಿದೆ.

ಇದನ್ನೆಲ್ಲ ಇಟ್ಟುಕೊಂಡು ತನಿಖೆ ಚುರುಕುಗೊಳಿಸಿದಾಗ 23 ವರ್ಷಗಳ ಹಿಂದೆ ವಿದ್ಯಾರ್ಥಿಗಳಾಗಿದ್ದ ಅನೇಕರಿಗೆ ಇಂತಹ ಅನುಭವಗಳಾಗಿವೆ. ಆಗ ಅಪ್ರಾಪ್ತರಾಗಿದ್ದರಿಂದ ತಿಳಿವಳಿಕೆ ಇಲ್ಲದೆ ಸುಮ್ಮನಾಗಿದ್ದರು. ಆದರೆ, ಈಕೆ ಮಾತ್ರ ಪಟ್ಟು ಹಿಡಿದು ಮನೆಪಾಠದ ವೇಳೆ ತನಗಾದ ದೌರ್ಜನ್ಯದ ವಿರುದ್ಧ ಹೋರಾಟಕ್ಕಿಳಿದಿದ್ದಾಳೆ.

ಕಳೆದ ಎರಡು ದಶಕಗಳಲ್ಲಿ 20 ಶಾಲೆಗಳನ್ನು ಬದಲಿಸಿರುವ ಓಝಾನ ಚಲನವಲನಗಳನ್ನು ಒಂದು ವರ್ಷ ಗಮನಿಸಿದ ಪೊಲೀಸರು, ಸಾಕಷ್ಟು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...