ಹುಲಿ ಇದೆ ಎಂದಾದರೆ ಹತ್ತಿರಕ್ಕೆ ಯಾವ ಪ್ರಾಣಿಯೂ ಅಪ್ಪಿತಪ್ಪಿಯೂ ಸುಳಿಯುವುದಿಲ್ಲ. ಆದರೆ, ಇಲ್ಲೊಂದು ಚಿಂಪಾಜಿ ಜಾತಿಯ ಗಿಬ್ಬನ್, 2 ಹುಲಿಗಳನ್ನು ಬಹಳ ಸಮಯಗಳ ಕಾಲ ಕೆಣಕಿ, ಛೇಡಿಸಿ ಅವುಗಳಿಂದ ಏನೂ ಮಾಡಲಾಗದೆ ಮಜಾ ತೆಗೆದುಕೊಂಡ ವಿಡಿಯೋ ಈಗ ವೈರಲ್ ಆಗಿದೆ.
ಐಎಫ್ಎಸ್ ಅಧಿಕಾರಿ ಸುಶಾಂತ್ ನಂದ ಅವರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದು, ಈಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
54 ಸೆಕೆಂಡ್ ವುಳ್ಳ ವಿಡಿಯೋ ಇದಾಗಿದ್ದು, ಗಿಬ್ಬನ್ ಮರದ ಮೇಲಿದ್ದರೆ, ಆ ಎರಡು ಹುಲಿಗಳು ಕೆಳಗೆ ಪವಡಿಸಿದ್ದವು. ಈ ವೇಳೆ ಜಿಮ್ನಾಸ್ಟಿಕ್ ಮಾದರಿಯಲ್ಲಿ ಗಿಬ್ಬನ್, ಮರದ ಕೊಂಬೆಗಳನ್ನು ಹಿಡಿದು ಕೆಳಗೆ ಜೋತಾಡಿ ಹುಲಿಗಳ ತಲೆಗೆ ಹೊಡೆಯುವುದನ್ನು ಬಹಳಷ್ಟು ಬಾರಿ ಮಾಡುತ್ತದೆ. ಆ ಹುಲಿಗಳು ಎಷ್ಟೇ ಹಿಡಿಯಲು ಹೋದರೂ ಆಗದಂತಹ ಪರಿಸ್ಥಿತಿಗೆ ತಂದೊಡ್ಡುತ್ತದೆ.
ಜುಲೈ 5ರಂದು ಅಪ್ಲೋಡ್ ಮಾಡಿದ ಈ ವಿಡಿಯೋಗೆ ನೆಟ್ಟಿಗರು ಫಿದಾ ಆಗಿದ್ದು, ಈಗಾಗಲೇ 8600 ವೀಕ್ಷಣೆ ಕಂಡಿದ್ದರೆ, ನೂರಾರು ಕಮೆಂಟ್ ಗಳು ಬಂದಿವೆ. ಅದಕ್ಕೊಂದು ಟ್ವಿಸ್ಟ್ ಸಿಕ್ಕಿದ್ದು, ತಾಯಿ ಹುಲಿ ಈಗ ಈ ಗಿಬ್ಬನ್ ಅನ್ನು ತನ್ನ ಮರಿಗೆ ಜಿಮ್ನಾಸ್ಟಿಕ್ ಟ್ರೈನರ್ ಆಗಿ ನೇಮಿಸಿಕೊಂಡಿದೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.
https://twitter.com/susantananda3/status/1279741413853261825?ref_src=twsrc%5Etfw%7Ctwcamp%5Etweetembed%7Ctwterm%5E1279741413853261825%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fdaring-gibbon-teases-tiger-cubs-video-goes-viral-watch%2F617620
https://twitter.com/Shivam96435338/status/1279743050865086466?ref_src=twsrc%5Etfw%7Ctwcamp%5Etweetembed%7Ctwterm%5E1279743050865086466%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fdaring-gibbon-teases-tiger-cubs-video-goes-viral-watch%2F617620