ವಿದ್ಯುತ್ ವಿತರಣಾ ನಿಗಮದ ಉದ್ಯೋಗಿಯಾಗಿ ಕೆಲಸ ಮಾಡುವುದು ಸಾಕಷ್ಟು ಸಾಹಸಮಯವಾದದ್ದು ಎಂಬುದು ನಮ್ಮೆಲ್ಲರಿಗೂ ತಿಳಿದ ವಿಚಾರವಾಗಿದೆ. ಇದೀಗ ಮಹಾರಾಷ್ಟ್ರ ರಾಜ್ಯ ವಿದ್ಯುತ್ ಮಂಡಲಿಯ ನೌಕರರೊಬ್ಬರು ತಮ್ಮ ಜೀವದ ಜೊತೆಗೆ ಆಟವಾಡುತ್ತಾ ವಿದ್ಯುತ್ ಸಂಪರ್ಕವನ್ನು ಸರಿಪಡಿಸುತ್ತಿರುವ ದೃಶ್ಯಾವಳಿಯೊಂದು ಮಹಿಂದ್ರಾ ಗ್ರೂಪ್ ಚೇರ್ಮನ್ ಆನಂದ್ ಮಹಿಂದ್ರಾರ ಗಮನ ಸೆಳೆದಿದೆ.
ಪಶ್ಚಿಮ ಘಟ್ಟಗಳ ದುರ್ಗಮ ಪರ್ವತವೊಂದರ ಮೇಲೆ ಇರುವ ವಿದ್ಯುತ್ ಲೈನ್‌ಗಳ ಮೇಲೆ ಕೆಲಸ ಮಾಡುತ್ತಿರುವ MSEB ಉದ್ಯೋಗಿಯೊಬ್ಬರ ಸಾಹಸದ ದೃಶ್ಯವೊಂದನ್ನು ಮಹಿಂದ್ರಾ ಶೇರ್ ಮಾಡಿದ್ದಾರೆ.
“ಸೋಮವಾರದಂದು ಮುಂಬಯಿಯಲ್ಲಿ ವಿದ್ಯುತ್ ಸಂಪರ್ಕವೇ ಇರಲಿಲ್ಲ. ಖಂಡಾಲಾ ಘಾಟ್‌ನಲ್ಲಿರುವ ಈ ಚಾನೆಲ್ ಇದಕ್ಕೆ ಪ್ರಮುಖ ಕಾರಣವಾಗಿತ್ತು. ಈ ಚಾನೆಲ್‌ನಲ್ಲಿ ದೊಡ್ಡದೊಂದು ಕಡಿತವಾಗಿತ್ತು. ಸತತ ನಾಲ್ಕು ದಿನಗಳ ಮಟ್ಟಿಗೆ MSEB ಉದ್ಯೋಗಿಗಳು ದಣಿವರಿಯದೇ ಕೆಲಸ ಮಾಡುತ್ತಿದ್ದು, ಸಮಸ್ಯೆಯನ್ನು ಸರಿಪಡಿಸಲು ಶ್ರಮಿಸುತ್ತಿದ್ದಾರೆ….ಅವರಿಗೊಂದು ಹ್ಯಾಟ್ಸ್ ಆಫ್” ಎಂದು ಮಹಾರಾಷ್ಟ್ರ ಮಾಹಿತಿ ನಿರ್ದೇಶಕ ದಯಾನಂದ್ ಕಾಂಬ್ಳೆ ಶೇರ್ ಮಾಡಿದ ಟ್ವೀಟ್ ಅನ್ನು ಆನಂದ್ ಮಹಿಂದ್ರಾ ರೀಟ್ವೀಟ್ ಮಾಡಿದ್ದಾರೆ.
“ಇನ್ನೊಮ್ಮೆ ದೂರುವ ಮುನ್ನ, ಈ ಹೈ ವೈರ್ ಡೇರ್ ಡೆವಿಲ್‌ಗಳ ಸುರಕ್ಷತೆ ಕುರಿತಾಗಿ ಆಲೋಚನೆ ಮಾಡುತ್ತೇನೆ” ಎಂದು ಆನಂದ್ ಮಹೀಂದ್ರಾ ರೀಟ್ವೀಟ್ ಕೋಟ್‌ನಲ್ಲಿ ತಿಳಿಸಿದ್ದಾರೆ.
https://twitter.com/Insaan92477899/status/1317826856293330952?ref_src=twsrc%5Etfw%7Ctwcamp%5Etweetembed%7Ctwterm%5E1317826856293330952%7Ctwgr%5Eshare_3%2Ccontainerclick_1&ref_url=https%3A%2F%2Fwww.news18.com%2Fnews%2Fbuzz%2Fdaredevil-mseb-employee-working-at-dangerous-heights-after-mumbai-power-cut-impresses-anand-mahindra-2982050.html