ಇದೀಗ ಕೇರಳ ಪೊಲೀಸರಿಂದಲೂ ʼಬೋನಿ ಎಂʼ ಹಾಡು ಬಳಕೆ 12-04-2021 12:20PM IST / No Comments / Posted In: Corona, Corona Virus News, Latest News, India ಕೇರಳದ ವೈದ್ಯಕೀಯ ವಿದ್ಯಾರ್ಥಿಗಳು ರಸ್ಪುಟಿನ್ ಹಾಡಿಗೆ ನೃತ್ಯ ಮಾಡಿದ ಬಳಿಕ ರಾತ್ರೋರಾತ್ರಿ ಫೇಮಸ್ ಆಗಿದ್ದರು. ಇದಾದ ಬಳಿಕ ಈ ಸಾಂಗ್ಗೆ ಸಾಕಷ್ಟು ಮಂದಿ ಹೆಜ್ಜೆ ಹಾಕಿದ್ದು 70ರ ದಶಕದ ಪ್ರಖ್ಯಾತ ಗೀತೆ ಈ ಮೂಲಕ ಮುನ್ನೆಲೆಗೆ ಬಂದಿದೆ. ಇದೀಗ ಕೇರಳ ಪೊಲೀಸರು ಕೂಡ ಈ ಹಾಡನ್ನ ಜನಜಾಗೃತಿಗಾಗಿ ಬಳಕೆ ಮಾಡಿಕೊಂಡಿದ್ದಾರೆ. ಅವರ ಟ್ವಿಟರ್ ಪೇಜ್ನಲ್ಲಿ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಗಳು ಇದೇ ಹಾಡಿಗೆ ನೃತ್ಯ ಮಾಡುತ್ತಿರುವ ರೀತಿಯಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದೆ. ಹತ್ತಿರದ ಲಸಿಕಾ ಕೇಂದ್ರಗಳಲ್ಲಿ ಲಸಿಕೆಯನ್ನ ಪಡೆದುಕೊಳ್ಳಿ. ಈ ಮೂಲಕ ಕೊರೊನಾ ಹರಡುವಿಕೆಯನ್ನ ನಾಶ ಮಾಡಿ. ಸಾಮಾನ್ಯ ಜೀವನಕ್ಕೆ ವಾಪಸ್ಸಾಗಿ ಎಂದು ಟ್ವಿಟರ್ನಲ್ಲಿ ಬರೆಯಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಟ್ವಿಟರ್ ಮಾತ್ರವಲ್ಲದೇ ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲೂ ಸದ್ದು ಮಾಡ್ತಿದೆ. ವಕೀಲರೊಬ್ಬರು ಲವ್ ಜಿಹಾದ್ ಶಂಕೆ ವ್ಯಕ್ತಪಡಿಸಿದ ಬಳಿಕ ಈ ವಿಡಿಯೋ ಭಾರೀ ಸದ್ದು ಮಾಡಿತ್ತು. ವಿಡಿಯೋದಲ್ಲಿ ನವೀನ್ ರಜಾಕ್ ವಿರುದ್ಧ ಆಕ್ರೋಶ ಹೊರ ಹಾಕಿದ್ದ ವಕೀಲ, ಜಾನಕಿ ಪೋಷಕರಿಗೆ ಎಚ್ಚರದಿಂದ ಇರುವಂತೆ ಸೂಚನೆ ನೀಡಿದ್ರು. ಇದಾದ ಬಳಿಕ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಸೇರಿದಂತೆ ಸಾಕಷ್ಟು ಮಂದಿ ಸಾಥ್ ನೀಡಿದ್ದರು. Get Vaccinated From Nearest Vaccination Centre..Crush The Curve..Back to Basics..#keralapolice #CovidVaccine pic.twitter.com/QfS8fPCoR3 — Kerala Police (@TheKeralaPolice) April 11, 2021