
ತಮಿಳುನಾಡಿನ ಕಲಕುರಿಚಿ ಕ್ಷೇತ್ರದ ಶಾಸಕ ಪ್ರಭು ಮದುವೆ ವಿಚಾರಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಪ್ರಭು ಪತ್ನಿ ಸೌಂದರ್ಯ ತಂದೆ, ಅರ್ಚಕ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಶಾಸಕರ ಮನೆ ಮುಂದೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಮುಂದಾಗಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಸೌಂದರ್ಯ ತಂದೆ ಸ್ವಾಮಿನಾಥನ್ ಅವರನ್ನು ವಶಕ್ಕೆ ಪಡೆದಿದ್ದಾರೆ.
ಶಾಸಕ, 35 ವರ್ಷದ ಪ್ರಭು, ಸೋಮವಾರ ತಮ್ಮ ಮನೆಯಲ್ಲಿ 19 ವರ್ಷದ ಸೌಂದರ್ಯ ಮದುವೆಯಾಗಿದ್ದಾರೆ. ಇದು ಸೌಂದರ್ಯ ತಂದೆಗೆ ಇಷ್ಟವಿರಲಿಲ್ಲ. ಇದನ್ನು ವಿರೋಧಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಸೌಂದರ್ಯ ನಂಬಿಸಿ, ಪ್ರಭು ಪ್ರೀತಿಯಲ್ಲಿ ಬೀಳಿಸಿಕೊಂಡಿದ್ದ. ಐದು ವರ್ಷಗಳ ಹಿಂದೆಯೇ ಪ್ರಭು ಪ್ರೀತಿ ನಾಟಕ ಶುರು ಮಾಡಿದ್ದನೆಂದು ಸೌಂದರ್ಯ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಆದ್ರೆ ಪ್ರಭು ಇದನ್ನು ಅಲ್ಲಗಳೆದಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದೆ ಒಬ್ಬರನ್ನೊಬ್ಬರು ಪ್ರೀತಿಸಲು ಶುರು ಮಾಡಿದ್ದೆವು ಎಂದು ಪ್ರಭು ಹೇಳಿದ್ದಾರೆ.
ಪ್ರಭು, ಸೌಂದರ್ಯ ಮನೆಯಲ್ಲಿಯೇ ಅನೇಕ ವರ್ಷ ಇದ್ದರಂತೆ. ಅವರನ್ನು ಮಗನಂತೆ ನೋಡಿಕೊಂಡಿದ್ದೆ. ಆದ್ರೆ ನಮ್ಮ ನಂಬಿಕೆಗೆ ಮೋಸ ಮಾಡಿದ್ದಾರೆಂದು ಸ್ವಾಮಿನಾಥನ್ ಆರೋಪ ಮಾಡಿದ್ದಾರೆ. ಮಗಳನ್ನು ಪುಸಲಾಯಿಸಿ ಮದುವೆ ಮಾಡಿಕೊಳ್ಳಲಾಗಿದೆ. ಅವಳು ಮದುವೆಗೆ ಸಿದ್ಧಳಿರಲಿಲ್ಲ. ಇಬ್ಬರ ಮಧ್ಯೆ 17 ವರ್ಷಗಳ ಅಂತರವಿದೆ ಎಂದು ಸ್ವಾಮಿನಾಥನ್ ಹೇಳಿದ್ದರೆ.
ಪ್ರಭು, ಸೌಂದರ್ಯ ಜೊತೆಗಿರುವ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ. ಇದ್ರಲ್ಲಿ ಸೌಂದರ್ಯ, ನಾಲ್ಕು ತಿಂಗಳ ಹಿಂದೆ ಪ್ರೀತಿ ಶುರುವಾಗಿತ್ತು. ಮದುವೆಗೆ ಯಾರ ಒತ್ತಡವಿರಲಿಲ್ಲವೆಂದಿದ್ದಾರೆ. ಮನೆಯವರ ಒಪ್ಪಿಗೆ ಕೇಳಿದ್ದೆವು. ಮನೆಯವರು ನೀಡಲಿಲ್ಲವೆಂದು ಪ್ರಭು ಹೇಳಿದ್ದಾರೆ.